ವಿಕಾಸನಗರ (ಉತ್ತರಾಖಂಡ್): ಹಿಮಾಚಲ ಕಡೆಗೆ ವಿಕಾಸನಗರದಿಂದ ಹೊರಟಿದ್ದ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ನದಿಗೆ ಬಿದ್ದಿರುವ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ. ನಾಲ್ವರು ಪ್ರಯಾಣಿಕರಿದ್ದ ಕಾರು ಕ್ವಾನು ಮಿನಾಸ್ ಮೋಟಾರು ಮಾರ್ಗದ ಬಳಿ ಟೊನ್ಸ್ ನದಿಗೆ ಬಿದ್ದಿದೆ. ಈ ದುರಂತದಲ್ಲಿ ಮೃತಪಟ್ಟ ನಾಲ್ವರು ಪ್ರಯಾಣಿಕರು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಚೌಪಾಲ್ ತಾಲೂಕಿನ ನರ್ವಾದ ನಿವಾಸಿಗಳು ಎಂದು ತಿಳಿದುಬಂದಿದೆ.
ಕಾರು ನದಿಗೆ ಬಿದ್ದಿರುವ ಮಾಹಿತಿ ಲಭಿಸಿದ ತಕ್ಷಣ ಕನುಂಗೋದ ಪೊಲೀಸ್ ಅಧಿಕಾರಿ ಚಕ್ರತಾ ಖಾಜನ್ ಸಿಂಗ್ ಅಸ್ವಾಲ್ ಅವರು ದುರಂತ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೂಡಲೇ SDRF ತಂಡವು ಕೂಡ ದೌಡಾಯಿಸಿದೆ. ನದಿಯಲ್ಲಿ ಬಿದ್ದಿರುವ ಕಾರನಲ್ಲಿದ್ದ ಪ್ರಯಾಣಿಕರ ಮೃತದೇಹಗಳನ್ನು ಎಸ್‌ಡಿಆರ್‌ಎಫ್ ಸಿಬ್ಬಂದಿ ಹೊರತೆಗೆದಿದ್ದಾರೆ.
ನಿಯಂತ್ರಣ ತಪ್ಪಿ ಟೊನ್ಸ್ ನದಿಗೆ ಬಿದ್ದ ಕಾರು:ಭಾನುವಾರ ಬೆಳಗ್ಗೆ ಆರು ಗಂಟೆ ವಾಹನ ಸಂಖ್ಯೆ ಹೆಚ್‌ಪಿ 08-14323 ವಿಕಾಸನಗರದಿಂದ ಹಿಮಾಚಲ ಪ್ರದೇಶದ ಕಡೆಗೆ ಹೊರಟಿತು. ಕ್ವಾನು ಮಿನಾಸ್ ಮೋಟಾರು ಮಾರ್ಗದ ಅಸೋಯಿ ಬಳಿ ಕಾರು ಸವಾರ್ನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ.
ಕಾರು ಚಾಲನೆ ಮಾಡುತ್ತಿದ್ದ ಸವಾರನೂ ಎದುರಿಗೆ ಬಂದ ವಾಹನ ಅಪಘಾತ ತಪ್ಪಿಸಲು ಹೋಗಿ ನದಿಗೆ ಕಡೆಗೆ ವಾಹನ ತಿರುಗಿದ್ದರಿಂದ ಟೊನ್ಸ್ ನದಿಗೆ ಬಿದ್ದಿದೆ. ಟೊನ್ಸ್ ನದಿಯಲ್ಲಿ 350 ಮೀಟರ್ ದೂರದ ವರೆಗೆ ಕಾರು ತೇಲಿಕೊಂಡು ಹೋಗಿದ್ದು, ಆದರೂ ಎಸ್‌ಡಿಆರ್‌ಎಫ್ ತಂಡವು ತೀವ್ರ ಕಾರ್ಯಾಚರಣೆ ನಡೆಸಿ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಲ್ವರು ಪ್ರಯಾಣಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರನ್ನು ಸಂದೀಪ್ (34), ಅಮರಜೀತ್ (36), ಪ್ರವೀಣ್ ಜಿಂಟಾ ಮತ್ತು ಮೋಹಿತ್ ಮಿಂಟಾ (28) ಎಂದು ಗುರುತಿಸಲಾಗಿದೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ಸಂಬಂಧಿಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ ಎಂದು ಕನುಂಗೋ ಪೊಲೀಸ್ ಅಧಿಕಾರಿ ಖಾಜನ್ ಸಿಂಗ್ ಅಸ್ವಾಲ್ ಹೇಳಿದ್ದಾರೆ.
ಲಾರಿ ಓಮ್ನಿ ನಡುವೆ ಡಿಕ್ಕಿ, ಮಗು ಸೇರಿ ಆರು ಮಂದಿ ಸಾವು.. ತಿರುಚ್ಚಿ(ತಮಿಳುನಾಡು):ತಿರುಚ್ಚಿ ಬೈಪಾಸ್ ಬಳಿ ಲಾರಿ ಮತ್ತು ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿದ್ದಾರೆ. ಸೇಲಂ ಜಿಲ್ಲೆಯ ಎಡಪ್ಪಾಡಿಯಿಂದ ತಿರುಚ್ಚಿ ಮೂಲಕ ಕುಂಭಕೋಣಂ ದೇವಸ್ಥಾನಕ್ಕೆ ಓಮ್ನಿಯಲ್ಲಿ ಕುಟುಂಬದ 9 ಸದಸ್ಯರು ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿಯೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ತಿರುಚ್ಚಿ ಜಿಲ್ಲೆಯ ಟೋಲ್ ಗೇಟ್ ಬಳಿ ಮುಂಜಾನೆ 3.50ಕ್ಕೆ ಅಪಘಾತ ಸಂಭವಿಸಿದೆ. ಓಮ್ನಿಯಲ್ಲಿದ್ದ ಒಂದು ಮಗು, ನಾಲ್ವರು ಮಹಿಳೆಯರು ಸೇರಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ವಾಟಾಳ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಇವರಿಗೆ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ತಿರುಚ್ಚಿ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂಓದಿ:ಮಹಿಳೆ ನಂಬಿದ ಉದ್ಯಮಿಗೆ ಮುಂಜಿ ಬೆದರಿಕೆ: ಹನಿ ಜಾಲದಿಂದ ಹೊರಬಂದು ಪೊಲೀಸರಿಗೆ ದೂರು