ನವದೆಹಲಿ :ಸರ್ಕಾರಿ ಸ್ವಾಮ್ಯದ ಸಿಐಎಲ್ ಸೇರಿದಂತೆ ಕಲ್ಲಿದ್ದಲು ಕಂಪನಿಗಳು ನಿರ್ದಿಷ್ಟ ಹರಾಜು ಬದಲು ಸಾಮಾನ್ಯ ಇ-ಹರಾಜು ಮೂಲಕ ಕಲ್ಲಿದ್ದಲು ಮಾರಾಟಕ್ಕೆ ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಇ-ಹರಾಜಿಗೆ ಅನುಮೋದನೆ ನೀಡಲಾಗಿದೆ. ಸಿಸಿಇಎ ಎಲ್ಲಾ ಕಲ್ಲಿದ್ದಲು ಕಂಪನಿಗಳು ಸಿಐಎಲ್/ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್)ನ ಲಿಂಕ್ ಮಾಡದ ಕಲ್ಲಿದ್ದಲನ್ನು ಇ-ಹರಾಜು ವಿಂಡೋ ಮೂಲಕ ಎಲ್ಲಾ ನೀಡಲು ಅನುಮೋದಿಸಿದೆ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿದೆ.
ಈ ಕ್ರಮದಿಂದಾಗಿ ಮಾರುಕಟ್ಟೆಯ ವಿರೂಪಗಳನ್ನು ತೆಗೆದು ಹಾಕುವ ಜೊತೆಗೆ ಎಲ್ಲಾ ಗ್ರಾಹಕರಿಗೆ ಒಂದೇ ದರವು ಇ-ಹರಾಜು ಮಾರುಕಟ್ಟೆಯಲ್ಲಿ ಸಿಗಲಿದೆ. ಇದು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಹಾಗೂ ದೇಶೀಯ ಕಲ್ಲಿದ್ದಲು ಬೇಡಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪ್ರಸ್ತುತ ಕಲ್ಲಿದ್ದಲು ಕಂಪನಿಗಳಿಗೆ ವಿವಿಧ ಅಂತಿಮ ಬಳಕೆಯ ಕ್ಷೇತ್ರಗಳಿಗೆ ಕಲ್ಲಿದ್ದಲು ಹಂಚಿಕೆ ಮಾಡುವ ವಿವೇಚನೆಯನ್ನು ತೆಗೆದುಹಾಕಲಾಗುತ್ತದೆ. ಕಲ್ಲಿದ್ದಲು ಕಂಪನಿಗಳು ತಮ್ಮ ಸ್ವಂತ ಗಣಿಗಳಿಂದ ಕಲ್ಲಿದ್ದಲು ಪಡೆಯುವ ಮೂಲಕ ಕಲ್ಲಿದ್ದಲು ಅನಿಲೀಕರಣ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಇದು ದೇಶದಲ್ಲಿ ಶುದ್ಧ ಕಲ್ಲಿದ್ದಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ:ಜಾರ್ಖಂಡ್ನಲ್ಲಿ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ 6 ಬೋಗಿಗಳಿಗೆ ಬೆಂಕಿ