ಗುವಾಹಟಿ (ಅಸ್ಸೋಂ):ಪ್ರಾಬಲ್ಯ ಸ್ಥಾಪಿಸಲು ಮತ್ತು ಭಾರತವನ್ನು ಪಾಕಿಸ್ತಾನವನ್ನಾಗಿ ಮಾಡುವ ಉದ್ದೇಶದಿಂದ 1930 ರಿಂದಲೇ ದೇಶದಲ್ಲಿ ಮುಸ್ಲಿಂರ ಜನ ಸಂಖ್ಯೆ ಹೆಚ್ಚಿಸಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
'ದೇಶ ವಿಭಜನೆ ವೇಳೆ ಅಲ್ಪಸಂಖ್ಯಾತರಿಗೆ ಕೊಟ್ಟ ಮಾತನ್ನು ಇಂದಿಗೂ ಪಾಲಿಸುತ್ತಿದ್ದೇವೆ' - ಸಿಎಎ ಎನ್ಆರ್ಸಿ ಬಗ್ಗೆ ಮೋಹನ್ ಭಾಗವತ್
ನೆರೆಯ ದೇಶಗಳ ಅಲ್ಪಸಂಖ್ಯಾತರಿಗೂ ನಾಗರಿಕತ್ವ ಕೊಡಲು ಈ ಕಾಯ್ದೆ ತರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದರು ಎಂದು ಭಾಗವತ್ ಪ್ರಸ್ತಾಪಿಸಿದರು.
ಗುವಾಹಟಿಯಲ್ಲಿ ಕಾರ್ಯಕ್ರಮವೊಮದರಲ್ಲಿ ಮಾತನಾಡಿದ ಭಾಗವತ್, ಪಂಜಾಬ್, ಸಿಂಧ್, ಅಸ್ಸೋಂ ಮತ್ತು ಬಂಗಾಳದಲ್ಲಿ ಈ ವ್ಯವಸ್ಥಿತ ಪ್ರಯತ್ನ ನಡೆದಿದ್ದು, ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಇನ್ನು ಜಾತ್ಯಾತೀತತೆ, ಸಾಮಾಜವಾದ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜಗತ್ತಿನಿಂದ ಭಾರತ ಕಲಿಯಬೇಕಿಲ್ಲ. ಏಕೆಂದ್ರೆ ಇವು ದೇಶದ ಸಂಪ್ರದಾಯ ಮತ್ತು ನಮ್ಮ ರಕ್ತದಲ್ಲೇ ಇವೆ ಎಂದು ಹೇಳಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳು ದೇಶದ ಜನರ ವಿರುದ್ಧವಾಗಿಲ್ಲ. ಜೊತೆಗೆ ದೇಶದ ಮುಸ್ಲಿಂರ ಮೇಲೂ ಇವು ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ವಿಭಜನೆ ಬಳಿಕ ದೇಶದ ಅಲ್ಪಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಹಾಗೆಯೇ ಇಂದಿಗೂ ಅದನ್ನು ಪಾಲಿಸುತ್ತಿದ್ದೇವೆ. ಆದ್ರೆ ಪಾಕಿಸ್ತಾನ ಅದನ್ನು ಪಾಲಿಸಿಲ್ಲ ಎಂದು ಭಾಗವತ್ ದೂರಿದರು.