ಕರ್ನಾಟಕ

karnataka

ETV Bharat / bharat

4 ವಿಧಾನಸಭೆ, 1 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ - ಉಪಚುನಾವಣೆ ಮತದಾನ

ಪಂಜಾಬ್​ ರಾಜ್ಯದ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಇಂದು ಬೆಳಗ್ಗೆ ಆರಂಭವಾಗಿದ್ದು, ಇದೀಗ ವೋಟಿಂಗ್​ ಚುರುಕುಗೊಂಡಿದೆ. ವಿಧಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಾರ್ಟಿಗೆ ಈ ಚುನಾವಣೆ ಪ್ರಥಮ ಪರೀಕ್ಷೆಯಾಗಿದೆ ಎಂದು ಹೇಳಲಾಗಿದೆ.

Bye poll begins in Tripura's four assembly seats
Bye poll begins in Tripura's four assembly seats

By

Published : Jun 23, 2022, 11:51 AM IST

ಅಗರ್ತಲಾ: ತ್ರಿಪುರಾ ವಿಧಾನಸಭೆಯ ನಾಲ್ಕು ಸ್ಥಾನಗಳ ಉಪಚುನಾವಣೆಗೆ ಮತದಾನವು ಇಂದು ಬೆಳಗ್ಗೆ 7 ಗಂಟೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರಂಭವಾಗಿದೆ. ಅಗರ್ತಲಾ, ಬೊರ್ಡೊವಾಲಿ ಟೌನ್, ಸುರ್ಮಾ ಮತ್ತು ಜುಬರಾಜನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ 25 ಕಂಪನಿಗಳು ಹಾಗೂ ತ್ರಿಪುರಾ ಸ್ಟೇಟ್ ರೈಫಲ್ಸ್​ ಜವಾನರನ್ನು ಚುನಾವಣಾ ಭದ್ರತೆಗೆ ನೇಮಿಸಲಾಗಿದೆ.

ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ 25 ಅಭ್ಯರ್ಥಿಗಳು ಕಣದಲ್ಲಿದ್ದು, 1,89,032 ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಬಿಜೆಪಿ ಸಚಿವ ಸುದೀಪ ರಾಯ್ ಬರ್ಮನ್ ಮತ್ತು ಬಿಜೆಪಿ ಎಂಎಲ್​ಎ ಆಸಿಸ್ ಕುಮಾರ ಸಹಾ ಇವರಿಬ್ಬರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಅಗರ್ತಲಾ ಹಾಗೂ ಟೌನ್ ಬೊರ್ಡೊವಾಲಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಬಿಜೆಪಿ ಶಾಸಕ ಆಸಿಸ್ ದಾಸ್ ತೃಣಮೂಲ ಕಾಂಗ್ರೆಸ್ ಸೇರಿದ್ದರಿಂದ ಹಾಗೂ ಸಿಪಿಐಎಂ ಶಾಸಕರಾಗಿದ್ದ ರಾಮೇಂದ್ರ ಚಂದ್ರ ದೇಬನಾಥ್ ಅವರ ನಿಧನದಿಂದ ಸುರ್ಮಾ ಹಾಗೂ ಜುಬರಾಜ ನಗರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಈವರೆಗೆ ಶೇ 20 ರಷ್ಟು ಮತದಾನವಾಗಿದ್ದು, ಇವಿಎಂಗಳಲ್ಲಿನ ದೋಷದ ಕಾರಣದಿಂದ 4 ಇವಿಎಂಗಳನ್ನು ಬದಲಾಯಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಿರಣ ಗಿತ್ತೆ ಈಟಿವಿ ಭಾರತ್​ಗೆ ತಿಳಿಸಿದರು.

ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭ: ಪಂಜಾಬ್​​​ ರಾಜ್ಯದ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಇಂದು ಬೆಳಗ್ಗೆ ಆರಂಭವಾಗಿದೆ. ವಿಧಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಾರ್ಟಿಗೆ ಈ ಚುನಾವಣೆ ಪ್ರಥಮ ಪರೀಕ್ಷೆಯಾಗಿದೆ ಎಂದು ಹೇಳಲಾಗಿದೆ.

ಸಂಗ್ರೂರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಕ್ಕೆ ಕೊನೆಯಾಗಲಿದೆ. ಜೂನ್ 26 ರಂದು ಮತ ಎಣಿಕೆ ನಡೆಯಲಿದೆ. ಮೂವರು ಮಹಿಳೆಯರು ಸೇರಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 15,69,240 ಅರ್ಹ ಮತದಾರರಿದ್ದಾರೆ.

ಇದನ್ನು ಓದಿ:ಸಿಕಂದರಾಬಾದ್​​​​ ಹಿಂಸಾಚಾರ.. ಮಾಸ್ಟರ್​ ಮೈಂಡ್​ ಬಂಧನ ಸಾಧ್ಯತೆ: ವಯೋಮಿತಿ ಇಳಿಕೆಯೇ ದಾಳಿಗೆ ಕಾರಣ?

ABOUT THE AUTHOR

...view details