ಕರ್ನಾಟಕ

karnataka

ETV Bharat / bharat

ಪಂಜಾಬ್​​ನಲ್ಲಿ ಬಸ್‌ಗಳಿಗೆ ಬೆಂಕಿ.. ಓರ್ವ ಸಜೀವ ದಹನ - ಬಸ್‌ ಆಕ್ಸಿಡೆಂಟ್

ನಿನ್ನೆ ರಾತ್ರಿ ಬಠಿಂಡಾದ ಭಾಯ್ ಕಾ ಬಸ್ ನಿಲ್ದಾಣದಲ್ಲಿ ಮೂರು ಬಸ್​​​ಗಳು ಬೆಂಕಿಗೆ ಆಹುತಿಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

Buses caught fire at Punjab
ಪಂಜಾಬ್​​ನಲ್ಲಿ ಬಸ್‌ಗಳಿಗೆ ಬೆಂಕಿ

By

Published : Apr 29, 2022, 8:49 AM IST

Updated : Apr 29, 2022, 9:17 AM IST

ಬಠಿಂಡಾ (ಪಂಜಾಬ್):ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್​ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ, ಪರಿಣಾಮ ಓರ್ವ ಸಜೀವ ದಹನಗೊಂಡಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪಂಜಾಬ್​​ನಲ್ಲಿ ಬಸ್‌ಗಳಿಗೆ ಬೆಂಕಿ

ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಭಗ್ತಾ ಭಾಯ್ ಕಾ ಬಸ್ ನಿಲ್ದಾಣದಲ್ಲಿ ಮೂರು ಬಸ್​​​ಗಳು ಬೆಂಕಿಗೆ ಆಹುತಿಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮೃತರು ಬಸ್ ಕಂಡಕ್ಟರ್ ಆಗಿರಬಹುದು ಎನ್ನಲಾಗುತ್ತಿದೆ. ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು, ಪರಿಶೀಲನೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ದೇಶದ ಮೇಲೆ ಸೂರ್ಯನ ಪ್ರತಾಪ... ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬಿಸಿಲೋ.. ಬಿಸಿಲು!!

ಬೆಂಕಿ ಹೊತ್ತಿಕೊಂಡ ಮೂರು ಬಸ್‌ಗಳಲ್ಲಿ ಎರಡು ಹೊಸ ಬಸ್‌ಗಳಾಗಿದ್ದು, ಸಂಚಾರಕ್ಕೆ ಸಿದ್ಧವಾಗಿದ್ದವು. ಆದರೆ, ಈ ದುರ್ಘಟನೆ ಸಂಭವಿಸಿ, ಬಸ್​​​ಗಳು ಅಗ್ನಿಗಾಹುತಿಯಾಗಿವೆ.

Last Updated : Apr 29, 2022, 9:17 AM IST

ABOUT THE AUTHOR

...view details