ಲಾತೂರ್ (ಮಹಾರಾಷ್ಟ್ರ):ಉದಗೀರ್ ನಿಂದ ಲಾತೂರ್ಗೆ ಹೋಗುವ ರಾಜ್ಯ ಹೆದ್ದಾರಿಯ ಲೊಹಾರಾ ಗ್ರಾಮದ ಬಳಿ ಸರ್ಕಾರಿ ಬಸ್ ಹಾಗೂ ಜೀಪ್ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ. ಅಪಘಾತದ ಕಾರಣದಿಂದ ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಬಸ್, ಜೀಪ್ ಡಿಕ್ಕಿ: ಐವರು ಸ್ಥಳದಲ್ಲೇ ಸಾವು - ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ
ಉದಗೀರ್ ನಿಂದ ಲಾತೂರ್ಗೆ ಹೋಗುವ ರಾಜ್ಯ ಹೆದ್ದಾರಿಯ ಲೊಹಾರಾ ಗ್ರಾಮದ ಬಳಿ ಸರ್ಕಾರಿ ಬಸ್ ಹಾಗೂ ಜೀಪ್ ಎದುರು ಬದುರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ
ಭೀಕರ ಅಪಘಾತದಲ್ಲಿ ಮೃತಪಟ್ಟವರ ಹೆಸರು ಹೀಗಿವೆ:ಅಪಘಾತದಲ್ಲಿಅಲೋಕ್ ತಾನಾಜಿ ಖೇಡ್ಕರ್ (ಸಂತ ಕಬೀರ್ ನಗರ, ಉದಗೀರ್), ಅಮೋಲ್ ಜೀವನರಾವ್ ದೇವಕ್ತೆ (ರಾವಂಕೋಲಾ ಜಿಲ್ಲೆ, ಜಲ್ಕೋಟ್), ಕೋಮಲ್ ವೆಂಕಟ್ ಕೊಡ್ರೆ (ಡೊರಾನಲ್ ಜಿಲ್ಲೆ, ಮುಖೇದ್ ಜಿಲ್ಲೆ. ನಾಂದೇಡ್), ಯಶೋಮತಿ ಜಯವಂತ ದೇಶಮುಖ (ಯವತ್ಮಾಲ್), ನಾಗೇಶ್ ಜ್ಞಾನೇಶ್ವರ್ ಗುಂಡೇವಾರ್ (ರೆ. ಬೀದರ್ ರಸ್ತೆ, ಉದ್ಗೀರ್) ಮೃತಪಟ್ಟಿದ್ದಾರೆ. ಇನ್ನು ಪ್ರಿಯಾಂಕಾ ಗಜಾನನ್ ಬನ್ಸೋಡೆ, ಗೋಪಾಲ್ ನಗರ, ಉದಗೀರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನು ಓದಿ:ಪಿಎಫ್ಐ ಮರಳಿ ಬರುತ್ತೇವೆ.. ಬ್ಯಾನ್ ಬೆನ್ನಲ್ಲೇ ರಸ್ತೆಯ ಮೇಲೆ ಬಂಟ್ವಾಳದಲ್ಲಿ ಬೆದರಿಕೆ ಸಂದೇಶ