ಚೆನ್ನೈ:ಇಲ್ಲಿನತಾಚೂರ್ ಬಳಿ ಬಸ್ ಮತ್ತು ಲಾರಿ ಅಪಘಾತಕ್ಕೀಡಾಗಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನೆಲ್ಲೂರು ಮೂಲದ ಸತೀಶ್ ಕುಮಾರ್ (42), ಬೆಂಗಳೂರಿನ ರೋಹಿತ್ ಪ್ರಸಾದ್ (24) ಹಾಗೂ ಕ್ಲೀನರ್ ಶ್ರೀಧರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಚೆನ್ನೈ ಮೂಲದ ಚಾಲಕ ಜಾನಕಿರಾಮನ್ ಸ್ಟಾನ್ಲಿ ಎಂಬವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಲಾರಿ-ಬಸ್ ನಡುವೆ ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ - ETv Bharat Karnataka
ಚೆನ್ನೈನ ತಾಚೂರ್ ಬಳಿ ಚಲಿಸುತ್ತಿದ್ದ ಬಸ್‌ವೊಂದು ಲಾರಿಗೆ ಡಿಕ್ಕಿ ಹೊಡೆದು ಸಾವು ನೋವು ಸಂಭವಿಸಿತು.
ಬಸ್ ಲಾರಿಗೆ ಡಿಕ್ಕಿ
ಹೈದರಾಬಾದ್‌ನಿಂದ ಹೊರಟ ಖಾಸಗಿ ಬಸ್ ಚೆನ್ನೈಗೆ ತೆರಳುತ್ತಿತ್ತು. ಅವಘಡದಲ್ಲಿ ಬಸ್ನ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಗಾಯಾಳುಗಳು ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಬಸ್-ಲಾರಿ ಮಧ್ಯೆ ಅಪಘಾತ: 6 ಜನ ಸಾವು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ