ಕರ್ನಾಟಕ

karnataka

ETV Bharat / bharat

ಅವಂತಿಪೋರಾದಲ್ಲಿ ಬಸ್​ ಪಲ್ಟಿ: ನಾಲ್ವರ ದುರ್ಮರಣ, 24ಕ್ಕೂ ಅಧಿಕ ಮಂದಿಗೆ ಗಾಯ - ಗೋರಿಪೋರಾ ಪ್ರದೇಶದಲ್ಲಿ ಬಸ್ ಪಲ್ಟಿ

ಜಮ್ಮು ಮತ್ತು ಕಾಶ್ಮೀರ ಅವಂತಿಪೋರಾದಲ್ಲಿ ಬಸ್​ ಪಲ್ಟಿಯಾದ ಪರಿಣಾಮ 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

bus accident
ಬಸ್​ ಪಲ್ಟಿ

By

Published : Mar 18, 2023, 12:22 PM IST

Updated : Mar 18, 2023, 12:55 PM IST

ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದ ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಂಚರಿಸುತ್ತಿದ್ದ ಬಸ್​ವೊಂದು ದಿಢೀರ್​ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಸ್ಥಳೀಯೇತರ ಕಾರ್ಮಿಕರು ಸಾವನ್ನಪ್ಪಿದ್ದು, 24 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಾಹಿತಿ ಪ್ರಕಾರ, ಅವಂತಿಪೋರಾದ ಗೋರಿಪೋರಾ ಪ್ರದೇಶದಲ್ಲಿ ಬಸ್ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ, ಮತ್ತೊಬ್ಬರು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಸುನೀಗಿದ್ದಾರೆ . 'ಘಟನೆಯಿಂದ ಅನೇಕ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಎಸ್‌ಡಿಹೆಚ್ ಪಾಂಪೋರ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 7:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮೃತರನ್ನು ನಸ್ರುದಿನ್ ಅನ್ಸಾರಿ, ರಾಜ್ ಕರಣ್ ದಾಸ್, ಸಲೀಂ ಅಲಿ ಮತ್ತು ಕೈಶರ್ ಆಲಂ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ :ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ: ಸರ್ವಿಸ್ ರಸ್ತೆ ಬಗ್ಗೆ ಅಧಿಕಾರಿ ಮಾಹಿತಿ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ."ಎನ್‌ಎಚ್‌ಡಬ್ಲ್ಯೂನಲ್ಲಿ ಸಂಚಾರವನ್ನ ಪುನಾರಂಭಿಸಲಾಗಿದೆ ಮತ್ತು ಗಾಯಾಳುಗಳನ್ನು ಶೃಂಗಾರ್ ಆಸ್ಪತ್ರೆಗಳಿಗೆ ರವಾನಿಸಲಾಗಿದೆ" ಎಂದು ಆವಂತಿಪೋರಾದ ಎಸ್‌ಎಸ್‌ಪಿ ಐಜಾಜ್ ಜರ್ಗಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ದಾವಣಗೆರೆ : ಬಸ್‌ ಪಲ್ಟಿಯಾಗಿ 20 ಜನರಿಗೆ ಗಾಯ, ಕಿಟಕಿ ಒಡೆದು ಹೊರಬಂದ ಪ್ರಯಾಣಿಕರು

ಇನ್ನು "ಎಸ್‌ಡಿಹೆಚ್ ಪಾಂಪೋರ್​ಗೆ ಕರೆತರಲಾದ ಇತರ 16 ಮಂದಿ ಗಾಯಾಳುಗಳಲ್ಲಿ 11 ಮಂದಿಯನ್ನ ಶ್ರೀನಗರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಎಸ್‌ಡಿಹೆಚ್‌ನ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ :ವಿಜಯಪುರ ಬಳಿ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿ ಕಾರು ಅಪಘಾತ

ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ : ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿ ಅವರು ಪ್ರಯಾಣಿಸುತ್ತಿದ್ದ ಕಾರೊಂದು ವಿಜಯಪುರ ನಗರದ ಹೊರವಲಯದ ಜುಮನಾಳ ಬಳಿ ಅಪಘಾತಕ್ಕೀಡಾಗಿತ್ತು. ಕ್ಯಾಂಟರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಘಟನೆಯಿಂದ ಸಚಿವೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.

ದಾವಣಗೆರೆಯಲ್ಲಿ ಖಾಸಗಿ ಬಸ್​ ಪಲ್ಟಿ : ಇದೇ ತಿಂಗಳ ಮಾರ್ಚ್​ 13 ರಂದು ಬೇತೂರ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಲ್ಟಿಯಾಗಿದ್ದ ಬಸ್​​ನಲ್ಲಿದ್ದ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಗಾಜು ಒಡೆದು ಕಿಟಕಿಯಿಂದ ಹೊರ ಬಂದಿದ್ದರು.

ಇದನ್ನೂ ಓದಿ :ರಸ್ತೆಯಲ್ಲಿ ಸಿಲುಕಿದ್ದ ಟ್ರಕ್​ ಉರುಳಿ ಕಂದಕಕ್ಕೆ ಬಿತ್ತು: ವಿಡಿಯೋ

Last Updated : Mar 18, 2023, 12:55 PM IST

ABOUT THE AUTHOR

...view details