ಕರ್ನಾಟಕ

karnataka

ETV Bharat / bharat

Watch.. ದೆಹಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ - ಈಟಿವಿ ಭಾರತ ಕನ್ನಡ

ದೆಹಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ - ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ - ಬಹುಮಹಡಿ ಕಟ್ಟಡ ಕುಸಿತದ ದೃಶ್ಯ ಮೊಬೈಲ್​ನಲ್ಲಿ ಸೆರೆ - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

Etv Bharat
Etv Bharat

By

Published : Mar 8, 2023, 6:19 PM IST

Updated : Mar 8, 2023, 7:08 PM IST

ದೆಹಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ - ವಿಡಿಯೋ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಭಜನ್​ಪುರ ಪ್ರದೇಶದಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದಿದೆ. ಸ್ಥಳೀಯರು ಕಟ್ಟಡ ಕುಸಿಯುತ್ತಿರುವ ವಿಡಿಯೋವನ್ನು ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಹುಮಹಡಿ ಕಟ್ಟಡ ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಕಟ್ಟಡ ಕುಸಿತ ಕಂಡಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕಟ್ಟಡ ಕುಸಿದಿರುವ ವಿಡಿಯೋವನ್ನು ಟ್ವಟರ್​ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕುಸಿದ ಕಟ್ಟಡದ ಅವಶೇಷಗಳ ಬಳಿ ಜನರು ನೆರದಿರುವುದನ್ನು ಕಾಣಬಹುದು.

ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾರೆ. ಕಟ್ಟಡ ಕುಸಿಯುವ ವೇಳೆ ಯಾರಾದರೂ ಒಳಗೆ ಇದ್ದರೆ ಎಂದು ಪರಿಶೀಲಿಸಲಾಗುತ್ತಿದೆ. ಇನ್ನು ಈ ವಿಡಿಯೋವನ್ನು ನೋಡಿದರೆ ಇದೊಂದು ಹಳೆಯ ಕಟ್ಟಡ ಎಂದು ತೋರುತ್ತದೆ. ಆದರೆ, ಇನ್ನೂ ಈ ಬಗ್ಗೆ ಅಧಿಕೃತವಾಗಿ ಏನೂ ದೃಢ ಪಟ್ಟಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅಪಘಾತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಕಟ್ಟಡ ಕುಸಿಯುವುದನ್ನು ಕಂಡು ಸುತ್ತಮುತ್ತಲಿನ ಜಾಗವನ್ನು ಜನರು ಖಾಲಿ ಮಾಡಿದ್ದಾರೆ.

ಇದನ್ನು ಓದಿ:ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ, ಮೂವರು ಸಿಬ್ಬಂದಿ ರಕ್ಷಣೆ

ಮಾಹಿತಿಯ ಪ್ರಕಾರ, ಈ ಕಟ್ಟಡದ ನೆಲ ಮಹಡಿಯಲ್ಲಿ ಒಂದು ಅಂಗಡಿ ಇತ್ತು. ಆದರೆ ಕುಟುಂಬಗಳು ಮೇಲಿನ ಮೂರು ಮಹಡಿಗಳಲ್ಲಿ ವಾಸಿಸುತ್ತಿದ್ದರು. ಕಟ್ಟಡದ ಮೇಲ್ಚಾವಣಿ ಮೇಲೆ ಪ್ಲಾಸ್ಟಿಕ್ ಸೆಡ್‌ಗಳನ್ನು ಹಾಕಲಾಗಿತ್ತು. ಕಟ್ಟಡವು ಕುಸಿಯುತ್ತಿರುವುದರಿಂದ ಸುತ್ತಮುತ್ತಲಿನ ಕೆಲವು ಮನೆಗಳು ಸಹ ಹಾನಿಗೊಳಗಾಗಿವೆ. ಆದಾಗ್ಯೂ, ಕೆಲವು ಜನರು ಸಹ ಅದರಲ್ಲಿ ಸಿಕ್ಕಿಹಾಕಿಕೊಂಡಿರಬಹುದೆಂಬ ಆತಂಕಗಳು ವ್ಯಕ್ತವಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ದೆಹಲಿ ಕಾರ್ಪೋರೇಷನ್​ ಹೇಳಿದ್ದೇನು?:ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಶಹಂದರ ಉತ್ತರ ವಲಯದ ಉಪ ಆಯುಕ್ತ ಸಂಜೀವ್ ಮಿಶ್ರಾ ಮಾತನಾಡಿ, ಕಟ್ಟಡ ಶಿಥಿಲಗೊಂಡಿದ್ದರಿಂದ ಅದರಲ್ಲಿ ವಾಸಿಸುವ ಜನರು ಕಟ್ಟಡವನ್ನು ಕೆಲ ದಿನಗಳ ಹಿಂದೆಯೇ ಖಾಲಿ ಮಾಡಿದ್ದರು. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಭಗ್ನಾವಶೇಷಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ತಂಡವು ಕಟ್ಟಡದ ಅವಶೇಷಗಳನ್ನು ತೆಗೆದು ಹಾಕಲು ಸಹಕರಿಸುತ್ತಿದೆ. ಸ್ಥಳೀಯ ಜನರು ಸಹ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ಕಳೆದ ಮಾರ್ಚ್ 1 ರಂದು ಉತ್ತರ ದೆಹಲಿಯ ರೋಶನಾರಾ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ಬೆಂಕಿಗೆ ಆಹುತಿಯಾಗಿ ಕುಸಿತ ಕಂಡಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಉಂಟಾಗಿರಲಿಲ್ಲ.ಡಿಸೆಂಬರ್‌ನಲ್ಲಿ ಶಾಸ್ರ್ರಿ ನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿತ್ತು. ಕಟ್ಟಡ ಖಾಲಿ ಇದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.

ಇದನ್ನೂ ಓದಿ :ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: 9 ವರ್ಷದ ಬಾಲಕಿ ಸೇರಿ ನಾಲ್ವರ ದುರ್ಮರಣ!

Last Updated : Mar 8, 2023, 7:08 PM IST

ABOUT THE AUTHOR

...view details