ನವದೆಹಲಿ: ಯಾವುದೇ ವರ್ಚುವಲ್ ಅಥವಾ ಡಿಜಿಟಲ್ ಆಸ್ತಿಗಳಿಂದ ಬರುವ ಆದಾಯದ ಮೇಲೆ ಕೇಂದ್ರ ಸರ್ಕಾರ ಶೇ.30 ರಷ್ಟು ಕಸ್ಟಮ್ಸ್ ತೆರಿಗೆ ವಿಧಿಸಿದೆ.
ಡಿಜಿಟಲ್ ಕರೆನ್ಸಿ ಆಥವಾ ಕ್ರಿಪ್ಟೋ ಕರೆನ್ಸಿ ವರ್ಗಾವಣೆ, ವರ್ಚುವಲ್ ಅಸೆಟ್ ಮೇಲೆ ಶೇ. ರಷ್ಟು ಟಿಡಿಎಸ್ ಹಾಗೂ ಡಿಜಿಟಲ್ ಕರೆನ್ಸಿ ವರ್ಗಾವಣೆ, ಆದಾಯದ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಘೋಷಿಸದ ಆಸ್ತಿ ಸಿಕ್ಕರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2022 - 23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು.
ವಿಶೇಷ ಚೇತನ ಪೋಷಕರ ಮಕ್ಕಳಿಗೆ ತೆರಿಗೆ ವಿನಾಯ್ತಿ. ಕೇಂದ್ರ, ರಾಜ್ಯ ಸರಕಾರದ ನೌಕರರಿಗೂ ತೆರಿಗೆ ವಿನಾಯಿತಿಯ ಜೊತೆಗೆ ಏಕರೂಪ ತೆರಿಗೆ ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಪ್ರಕಟಿಸಿದರು.
ವರ್ಚುಯಲ್ ಆಸ್ತಿ ವರ್ಗಾವಣೆಗೆ ಯಾವುದೇ ಕಡಿತಗಳು ಅಥವಾ ವಿನಾಯಿತಿಗಳು ಇರುವುದಿಲ್ಲ. ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ಉಂಟಾದ ನಷ್ಟವನ್ನು ಆದಾಯದಲ್ಲಿ ಸೇರಿಸಲಾಗುವುದಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ