ಕರ್ನಾಟಕ

karnataka

ETV Bharat / bharat

ಪಾಕಿಸ್ತಾನದಿಂದ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​

ಭಾರತ ಮತ್ತು ಪಾಕಿಸ್ತಾನ ಗಡಿದಲ್ಲಿ ಮತ್ತೊಂದು ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಪತ್ತೆಯಾಗಿದೆ.

bsf-shoots-down-pakistani-drone-in-punjab-5-kg-heroin-seized
ಪಾಕಿಸ್ತಾನದಿಂದ ಹೆರಾಯಿನ್ ಹೊತ್ತು ತರುತ್ತಿದ್ದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​

By

Published : Feb 3, 2023, 4:40 PM IST

ಅಮೃತಸರ (ಪಂಜಾಬ್​): ಪಾಕಿಸ್ತಾನದಿಂದ ಭಾರತದೊಳಗೆ ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಟ ಯತ್ನ ಮುಂದುವರೆದಿದೆ. ಪಂಜಾಬ್​ನ ಅಮೃತಸರ ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಹೆರಾಯಿನ್ ಹೊತ್ತು ಬಂದಿದ್ದ ಪಾಕಿಸ್ತಾನದ ಮತ್ತೊಂದು ಡ್ರೋನ್​ ಅನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರು ಹೊಡೆದುರುಳಿಸಿದ್ದಾರೆ. ಈ ಡ್ರೋನ್‌ನೊಂದಿಗೆ ಐದು ಕೆಜಿ ಹೆರಾಯಿನ್ ಕೂಡ ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಕಕ್ಕರ್ ಗ್ರಾಮದ ಗಡಿ ಪೋಸ್ಟ್ ಬಳಿ ಗುರುವಾರ-ಶುಕ್ರವಾರದ ಮಧ್ಯರಾತ್ರಿ 2.30ರ ಸುಮಾರಿಗೆ ಡ್ರೋನ್ ಚಲನವಲನ ಕಂಡುಬಂದಿದೆ. ಗಡಿ ಗಸ್ತು ತಿರುಗುತ್ತಿದ್ದ ಬಿಎಸ್​ಎಫ್​ನ 22 ಬೆಟಾಲಿಯನ್​ ಯೋಧರಿಗೆ ಇದ್ದಕ್ಕಿದ್ದಂತೆ ಡ್ರೋನ್ ಶಬ್ದ ಕೇಳಿಸಿದೆ. ಅಂತೆಯೇ, ಪಂಜಾಬ್​ ಪೊಲೀಸರ ಜೊತೆಗೂಡಿ ಅದನ್ನು ಗುರುತಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಡ್ರೋನ್​ ಕಣ್ಣಿಗೆ ಬೀಳುತ್ತಿದ್ದಂತೆ ಸೈನಿಕರು ಬೆನ್ನಟ್ಟಿ ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿ ಶುರು ಮಾಡಿದ ಸ್ವಲ್ಪ ಸಮಯದ ನಂತರ ಡ್ರೋನ್‌ ಹಾರಾಟ ಮತ್ತು ಸದ್ದು ಸಂಪೂರ್ಣವಾಗಿ ಸ್ಥಗಿತವಾಗಿದೆ. ಡ್ರೋನ್​ ಪತ್ತೆಗಾಗಿ ಗಡಿಯಲ್ಲಿ ರಾತ್ರಿಯಿಂದ ಬೆಳಗಿನವರೆಗೆ ಯೋಧರು ಶೋಧ ಕಾರ್ಯ ನಡೆಸಿದ್ದಾರೆ. ಕಕ್ಕರ್ ಗ್ರಾಮದ ಹೊಲದಲ್ಲಿ ಡ್ರೋನ್ ಬಿದ್ದಿರುವುದು ಗೊತ್ತಾಗಿದೆ. ಈ ಡ್ರೋನ್‌ಗೆ ಐದು ಕೆಜಿ ಹೆರಾಯಿನ್ ತುಂಬಿ​ ಕಟ್ಟಿದ್ದ ಪ್ಯಾಕೇಟ್​ ಸಹ ದೊರೆತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿಯಿಂದ 2 ಕಿಮೀ ದೂರದಲ್ಲಿ ಪತ್ತೆ: ಕಾರ್ಯಾಚರಣೆ ಬಗ್ಗೆ ಪಂಜಾಬ್ ಡಿಜಿಪಿ ಟ್ವೀಟ್​ ಮಾಡಿದ್ದು,"ಒಂದು ಪ್ರಮುಖ ಯಶಸ್ವಿ ಕಾರ್ಯಾಚರಣೆಯಲ್ಲಿ ಕಕ್ಕರ್ ಗ್ರಾಮ ಸಮೀಪ ಅಮೃತಸರ ಪೊಲೀಸರು ಮತ್ತು ಬಿಎಸ್‌ಎಫ್‌ ಯೋಧರು 6 ವಿಂಗ್ ಡ್ರೋನ್‌ ಸಮೇತ ಐದು ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ ಎರಡು ಕಿಮೀ ದೂರದಲ್ಲಿ ಡ್ರೋನ್​ ಪತ್ತೆಯಾಗಿದೆ. ಇದನ್ನು ಎಕೆ 47 ಗನ್​ನಿಂದ ಒಟ್ಟು 12 ಸುತ್ತಿನ ಫೈರಿಂಗ್‌ ಮಾಡಿ ಹೊಡೆದುರುಳಿಸಲಾಗಿದೆ. ಈ ಡ್ರೋನ್​ಅನ್ನು ಅಮೆರಿಕ ಮತ್ತು ಚೀನಾದಲ್ಲಿ ಉತ್ಪಾದಿಸಿದ ಆಯ್ದ ಭಾಗಗಳಿಂದ ತಯಾರಿಸಲಾಗಿದೆ" ಎಂದು ತಿಳಿಸಿದ್ದಾರೆ.

ಪಂಜಾಬ್​ನ ಕಕ್ಕರ್ ಗ್ರಾಮದಲ್ಲಿ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ವಶಕ್ಕೆ ಪಡೆದ ಯೋಧರು

ಇದನ್ನೂ ಓದಿ:ಇಂಡೋ - ಪಾಕ್ ಗಡಿಯಿಂದ 2 ಕಿಮೀ ದೂರದಲ್ಲಿ ಹೈಟೆಕ್ ಡ್ರೋನ್​ ಹೊಡೆದುರುಳಿಸಿದ ಪೊಲೀಸರು: 5 ಕೆಜಿ ಹೆರಾಯಿನ್​ ಜಪ್ತಿ

ಇದು 7ನೇ ಡ್ರೋನ್​: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದಲ್ಲಿ ನಿರಂತರವಾಗಿ ಡ್ರೋನ್​ಗಳ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಹೆರಾಯಿನ್ ಸಾಗಾಟ ನಡೆಯುತ್ತಲೇ ಇದೆ. ಇದರ ತಡೆಗೆ ಪೊಲೀಸರು ಮತ್ತು ಬಿಎಸ್​ಎಫ್​ ಯೋಧರು ಸತತವಾಗಿ ಕಾರ್ಯಾಚರಣೆ ಮಾಡಿದ್ದು, ಕಳೆದ ಎರಡು ತಿಂಗಳಿಂದ ಇದುವರೆಗೆ ಪಾಕಿಸ್ತಾನದಿಂದ ಹೆರಾಯಿನ್​ ಹೊತ್ತು ತರುತ್ತಿದ್ದ ಒಟ್ಟು ಏಳು ಡ್ರೋನ್​ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದ್ದಾರೆ.

ಜನವರಿ 22ರಂದು ಕೂಡ ಇದೇ ಕಕ್ಕರ್ ಗ್ರಾಮದ ಸಮೀಪ 5 ಕೆಜಿ ಹೆರಾಯಿನ್​ ಸಾಗಿಸಲು ಯತ್ನಿಸುತ್ತಿದ್ದ 10 ಲಕ್ಷ ರೂಪಾಯಿ ಮೌಲ್ಯದ ಹೈಟೆಕ್​ ಹೆಕ್ಸಾಕಾಪ್ಟರ್ ಡ್ರೋನ್​ನನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದರು. ಜನವರಿ 15ರಂದು ಕೂಡ ಪಾಕಿಸ್ತಾನದ ಡ್ರೋಣ್​ ಹೊಡೆದುರುಳಿಸಿ, ಸುಮಾರು 30 ಕೋಟಿ ಮೌಲ್ಯದ ಹೆರಾಯಿನ್​ ವಶಕ್ಕೆ ಪಡೆದಿದ್ದರು. ಡಿಸೆಂಬರ್​ 25ರಂದು ಅಕ್ರಮ ಮಾದಕ ವಸ್ತು ದಂಧೆಯ ಇಬ್ಬರು ಕಿಂಗ್​ ಪಿನ್​ಗಳ ಸಮೇತವಾಗಿ 10 ಕೆಜಿ ಹೆರಾಯಿನ್​ ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ಅಮೆರಿಕದಲ್ಲಿ ನಿರ್ಮಿತ ಡ್ರೋನ್ ​ಅನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿದ್ದರು.

ಇದನ್ನೂ ಓದಿ:ಗಡಿಯಾಚೆಗಿನ ಡ್ರಗ್ಸ್​ ದಂಧೆಯ ಕಿಂಗ್​ ಪಿನ್​ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ

ABOUT THE AUTHOR

...view details