ಜಮ್ಮು (ಶ್ರೀನಗರ):ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಶನಿವಾರ ಮುಂಜಾನೆ ಪಾಕ್ನ ಎರಡು ಡ್ರೋನ್ಗಳು ಒಳನುಸುಳಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಡ್ರೋನ್ಗಳು ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದ್ದು, ಡ್ರೋನ್ ಹೊಡೆದುರುಳಿಸಲು ಭದ್ರತಾ ಪಡೆ ಸಿಬ್ಬಂದಿ ಸುಮಾರು 15 ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಎರಡೂ ಡ್ರೋನ್ಗಳು ಪಾಕಿಸ್ತಾನದ ಗಡಿ ದಾಟಿ ವಾಪಸ್ ತೆರಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.