ಕರ್ನಾಟಕ

karnataka

By

Published : Mar 3, 2021, 1:16 PM IST

ETV Bharat / bharat

ಶೂಟಿಂಗ್​ ಅಭ್ಯಾಸದ ವೇಳೆ ಗುಂಡು ತಗುಲಿ ಬಿಎಸ್​ಎಫ್​ ಯೋಧ ಸಾವು

ಶೂಟಿಂಗ್​ ಅಭ್ಯಾಸದ ವೇಳೆ ಗುಂಡು ತಗುಲಿ ಯೋಧ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಪೋಖ್ರಾನ್​ನಲ್ಲಿ ನಡೆದಿದೆ.

BSF jawan die
ಬಿಎಸ್​ಎಫ್​ ಯೋಧ ಸಾವು

ಜೈಸಲ್ಮೇರ್ (ರಾಜಸ್ಥಾನ):ರಾಜಸ್ಥಾನದ ಪೋಖ್ರಾನ್​ನಲ್ಲಿ ಶೂಟಿಂಗ್​ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡು ತಗುಲಿ ಯೋಧನೋರ್ವ ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶದ ಆಗ್ರಾ ಮೂಲದ 32 ವರ್ಷದ ಬಿಎಸ್ಎಫ್ ಯೋಧ ಸತೀಶ್​ ಮೃತರು. ಮಾಹಿತಿಯ ಪ್ರಕಾರ, ಗುಜರಾತ್‌ನ ಭುಜ್‌ನಿಂದ ಬಿಎಸ್‌ಎಫ್‌ನ 1077ನೇ ಬೆಟಾಲಿಯನ್ ಪೋಖ್ರಾನ್​ಫೀಲ್ಡ್ ಫೈರಿಂಗ್ ಶ್ರೇಣಿಯಲ್ಲಿ ಅಭ್ಯಾಸಕ್ಕಾಗಿ ಬಂದಿದೆ. ಈ ಸೆಷನ್​ನಲ್ಲಿ 105 ಎಂಎಂ ಶೂಟಿಂಗ್​ ಅಭ್ಯಾಸ ನಡೆಸಲಾಗುತ್ತಿದ್ದು, ಈ ವೇಳೆ ಅಚಾನಕ್​ ಆಗಿ ಗುಂಡು ಸತೀಶ್​ಗೆ ತಗುಲಿದೆ. ಘಟನೆಯಲ್ಲಿ ಸತೀಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ಸಾಹುಕಾರ್​ ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ತಲೆದಂಡ ಫಿಕ್ಸ್​.!?

ಮೃತ ಜವಾನ್ ಅವರ ಶವವನ್ನು ಪೋಖ್ರಾನ್​ನಲ್ಲಿರುವ ರಾಜ್ಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ನಂತರ ಬಿಎಸ್ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ.

ಇದು ಒಂದು ವಾರದಲ್ಲಿ ನಡೆದ ಎರಡನೇ ಘಟನೆ. ಇದಕ್ಕೂ ಮೊದಲು, ಅಭ್ಯಾಸದ ಅವಧಿಯಲ್ಲಿ ಓರ್ವ ಯೋಧ ಪ್ರಾಣ ಕಳೆದುಕೊಂಡಿದ್ದರು.

ABOUT THE AUTHOR

...view details