ಅಮೃತಸರ: ಅರಿವಿಲ್ಲದೇ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿರುವ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಪಂಜಾಬ್‌ನ ಅಮೃತಸರ (ಗ್ರಾಮೀಣ) ಜಿಲ್ಲೆಯ ಕಮೀರ್ಪುರ ಗ್ರಾಮದ ಬಳಿ ಬಿಎಸ್‌ಎಫ್ ಸಿಬ್ಬಂದಿ ಶುಕ್ರವಾರ ಬಂಧಿಸಿದೆ.
ಈಗಾಗಲೇ ಭಾರತ ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜಿಸಲಾಗಿರುವ ಬಿಎಸ್ಎಫ್ ಸಿಬ್ಬಂದಿಗೆ ಜುಲೈ 14 ರಂದು ಗಡಿ ಬೇಲಿಯ ಮುಂದೆ ಒಬ್ಬ ಪಾಕಿಸ್ತಾನಿ ಪ್ರಜೆ ಸಿಕ್ಕಿಬಿದ್ದಿದ್ದಾನೆ ಎಂದು ಬಿಎಸ್ಎಫ್ ಹೇಳಿದೆ. ಆ ಪಾಕಿಸ್ತಾನಿ ಪ್ರಜೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಅಮೃತಸರ ಜಿಲ್ಲೆಯ ಕಮೀರ್ಪುರ ಗ್ರಾಮದ ಬಳಿಯ ಪ್ರದೇಶದಲ್ಲಿ ಭಾರತದ ಪ್ರದೇಶವನ್ನು ಪ್ರವೇಶಿಸಿದ್ದಾನೆ. ವಶಕ್ಕೆ ಪಡೆದ ಗಡಿ ಭದ್ರತಾ ಪಡೆ ನಂತರ ಆತನನ್ನು ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನ ರೇಂಜರ್ಸ್‌ಗೆ ಹಸ್ತಾಂತರಿಸಿದ್ದಾರೆ.
ಪಾಕಿಸ್ತಾನದ ರೇಂಜರ್ಗಳ ಜೊತೆ ಸಂಪರ್ಕ:ವಿಚಾರಣೆ ವೇಳೆ ಬಂಧಿತ ಪಾಕಿಸ್ತಾನಿ ಪ್ರಜೆ ಭಾರತೀಯ ಪ್ರದೇಶಕ್ಕೆ ಅರಿವಿಲ್ಲದೇ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ. ಆತನಿಂದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಬಿಎಸ್‌ಎಫ್ ತಿಳಿಸಿದೆ. ಇದಾದ ನಂತರ, ಗಡಿ ಭದ್ರತಾ ಪಡೆ ಪಾಕಿಸ್ತಾನದ ರೇಂಜರ್‌ಗಳನ್ನು ಸಂಪರ್ಕಿಸಿದ್ದು, ಈ ವಿಷಯದ ಬಗ್ಗೆ ಪ್ರತಿಭಟನೆ ದಾಖಲಿಸಿದೆ. ಏಪ್ರಿಲ್ 14 ರಂದು ಸಂಜೆ 7 ರ ಸುಮಾರಿಗೆ, ಉದ್ದೇಶಪೂರ್ವಕವಲ್ಲದೇ ಗಡಿ ದಾಟಿದಾಗ ಸಿಕ್ಕಿಬಿದ್ದ ಪಾಕಿಸ್ತಾನಿ ಪ್ರಜೆಯನ್ನು ಮಾನವೀಯ ಆಧಾರದ ಮೇಲೆ ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಲಾಯಿತು. ಅರಿವಿಲ್ಲದೇ ಗಡಿ ದಾಟುವ ಜನರೊಂದಿಗೆ ವ್ಯವಹರಿಸುವಾಗ, ಬಿಎಸ್ಎಫ್ ಯಾವಾಗಲೂ ಮಾನವೀಯ ಮನೋಭಾವವನ್ನು ಅನುಸರಿಸುತ್ತದೆ ಎಂದು ಬಿಎಸ್ಎಫ್ ಹೇಳಿದೆ.