ಖಾಂಡ್ವಾ (ಮಧ್ಯಪ್ರದೇಶ): ಭಿಕ್ಷೆ ಬೇಡಲು ಬಂದ ಸಾಧುವೊಬ್ಬರಿಗೆ ಯುವಕನೊಬ್ಬ ಮನಸೋ ಇಚ್ಛೆ ಥಳಿಸಿ, ಆತನ ಕೂದಲು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾಧುವಿಗೆ ಥಳಿಸಿರುವ ಮತ್ತು ಬಲವಂತದಿಂದ ಕೂದಲು ಕತ್ತರಿಸಿದ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಪಟಜಾನ್ ಗ್ರಾಮದಲ್ಲಿ ಈ ಸಾಧು ಭಿಕ್ಷೆ ಕೇಳುತ್ತಿದ್ದಾಗ ರೆಸ್ಟೋರೆಂಟ್ನ ಮ್ಯಾನೇಜರ್ನ ಮಗ ಸ್ಥಳಕ್ಕೆ ಬಂದು ಕೂದಲು ಹಿಡಿದು ಎಳೆದಾಡಿ ಹೊಡೆಯಲು ಶುರು ಮಾಡಿದ್ಧಾನೆ. ಆದರೆ, ಕ್ಷೌರದ ಅಂಗಡಿಗೆ ಸನ್ಯಾಸಿಯನ್ನು ಎಳೆದುಕೊಂಡು ಬಂದು ಕತ್ತರಿಯಿಂದ ತಾನೇ ಕತ್ತರಿಸಿದ್ದಾನೆ. ಕೂದಲು ಕತ್ತರಿಸದಂತೆ ಆ ಸಾಧು ಎಷ್ಟೇ ಮನವಿ ಮಾಡಿದರೂ ಬಿಡಿದೇ ಕತ್ತರಿಸಿದ್ದಾನೆ. ಆದರೆ, ಈ ಸಾಧುವಿನೊಂದಿಗೆ ಈ ಯುವಕ ಹೀಗೆ ನಡೆದುಕೊಂಡ ಎಂಬ ಬಗ್ಗೆ ನಿಖರವಾಗಿ ಗೊತ್ತಾಗಿಲ್ಲ.