ಮೊರಾದಾಬಾದ್(ಉತ್ತರ ಪ್ರದೇಶ): ತಾನು ಪ್ರೀತಿ ಮಾಡ್ತಿದ್ದ ಯುವಕನ ಮನೆಗೆ ಬಂದಿರುವ ಯುವತಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಆತನ ಮೇಲೆ ಒತ್ತಡ ಹೇರಿದ್ದಾಳೆ. ಮರ್ಯಾದೆಗೆ ಹೆದರಿದ ಯುವತಿಯ ಸಹೋದರ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಮೊರಾದಾಬಾದ್ ಜಿಲ್ಲೆಯ ಭೋಜ್ಪುರದ ರಾಣಿನಾಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನೀಲಂ ಎಂಬಾಕೆ ಅದೇ ಗ್ರಾಮದ ಯುವಕ ಮೋಹಿತ್ ಯಾದವ್ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇದರ ಬಗ್ಗೆ ತಂದೆಗೆ ಗೊತ್ತಾಗುತ್ತಿದ್ದಂತೆ ಬೇರೆ ಕಡೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಈ ವಿಷಯ ಯುವತಿಗೆ ತಿಳಿದು ಪ್ರಿಯಕರನ ಮನೆಗೆ ಹೋಗಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ.