ಆದಿಲಾಬಾದ್(ತೆಲಂಗಾಣ): ವಿವಾಹ ಸಮಾರಂಭದಲ್ಲಿ ಸಾಮಾನ್ಯವಾಗಿ ವಧುವರರ ಆಗಮನ ವಿಶೇಷವಾಗಿರುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ವರನ ಹಳ್ಳಿಗೆ ವಧು ಎತ್ತಿನ ಗಾಡಿಯಲ್ಲಿ ಬಂದಿದ್ದಾರೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ. ವಧುವಿನ ಸಂಬಂಧಿಕರು ಸಹ ಈ ಸುಡುಬಿಸಿಲಿನಲ್ಲಿ ನಡೆದೇ ವಿವಾಹ ನಡೆದ ಸ್ಥಳಕ್ಕೆ ತಲುಪಿದ್ದಾರೆ.
ಅದಿಲಾಬಾದ್ ಜಿಲ್ಲೆಯ ವನವಾತ್ ಪಂಚಾಯತ್ ವ್ಯಾಪ್ತಿಯ ಮಾಂಗ್ಲಿಯ ಸೆಡ್ಮಕಿ ಸೀತಾಬಾಯಿ ಅವರ ಪುತ್ರ ಕೋಶ್ರಾವ್ ಅವರ ವಿವಾಹವು ಗುಡಿಹತ್ನೂರು ಮಂಡಲದ ಜೀಡಿಪಲ್ಲಿ ಗ್ರಾಮದ ಗಂಗಾದೇವಿ ಅವರೊಂದಿಗೆ ನಿಶ್ಚಯವಾಗಿತ್ತು. ಮದುವೆ ಚೆನ್ನಾಗಿಯೇ ನಡೆಯಿತು. ಸಮಾರಂಭವನ್ನು ವೀಕ್ಷಿಸಲು ಸಂಬಂಧಿಕರು ಸಹ ಬಂದಿದ್ದರು. ಆದರೆ, ವಧು ಮತ್ತು ಅವರ ಸಂಬಂಧಿಕರು ಮದುವೆ ಸ್ಥಳಕ್ಕೆ ಬರಲು ತೊಂದರೆ ಅನುಭವಿಸಿದ್ದಾರೆ. ವಧು ಎತ್ತಿನ ಬಂಡಿಯಲ್ಲಿ ಬಂದಿದ್ದರೆ, ಸಂಬಂಧಿಕರು ನಡೆದುಕೊಂಡು ಬಂದಿದ್ದಾರೆ.