ಬರೇಲಿ(ಉತ್ತರಪ್ರದೇಶ): ಜಿಲ್ಲೆಯ ಹಳ್ಳಿಯೊಂದರಲ್ಲಿ ವಧು ತನ್ನ ಮಾವನ ಮನೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾಳೆ. ಬಿಜೆಪಿಯ ನಗರ ಉಪಾಧ್ಯಕ್ಷ ಬಾದಾನ್ ವೆದ್ರಾಮ್ ಲೋಧಿಯವರ ಪುತ್ರಿ ಈ ರೀತಿ ಕಾಪ್ಟರ್ನಲ್ಲಿ ಬಂದು ಗಮನ ಸೆಳೆದಿರುವ ವಧು.
ಅಯೋನ್ಲಾ ಪಟ್ಟಣದ ಆಲಂಪುರ್ ಕೋಟ್ ಗ್ರಾಮದ ಅಧ್ಯಕ್ಷರ ಹುದ್ದೆಗೆ ವಧು ವರ್ಮಾ ಸ್ಪರ್ಧಿಸಬೇಕಿತ್ತು. ನಾಮಪತ್ರ ಸಲ್ಲಿಸಬೇಕೆಂದರೆ, ಅವರು ಆ ಗ್ರಾಮದ ಮತದಾರರಾಗಿರಬೇಕಿತ್ತು. ಆದ್ದರಿಂದ 2020 ರ ಡಿಸೆಂಬರ್ನಲ್ಲಿ ಒಮೇಂದ್ರ ಸಿಂಗ್ರನ್ನು ಕೋರ್ಟ್ನಲ್ಲಿ ವಿವಾಹವಾಗಿದ್ದರು.