ರೋಹ್ಟಾಸ್(ಬಿಹಾರ): ಸುಮಾರು 8 ವರ್ಷಗಳ ಕಾಲ ಪ್ರೀತಿ, ಮದುವೆ ಹೆಸರಲ್ಲಿ ಯುವತಿಯನ್ನು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ ಯುವಕನ ವಿರುದ್ಧ ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆಯ ಮೊರೆಹೋಗಿದ್ದಾಳೆ. ದಾಲ್ಮಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತನ್ನ ಮತ್ತು ದೆಹಲಿಯ ನಿವಾಸಿ ರವಿಕುಮಾರ್ ಎಂಬಾತನ ನಡುವೆ ಸುಮಾರು 8 ವರ್ಷಗಳಿಂದ ಪ್ರೇಮ ಸಂಬಂಧವಿದೆ. ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವು. ಆಗಾಗ ರವಿಕುಮಾರ್ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂದು ಭೋಜ್‌ಪುರ್ ಜಿಲ್ಲೆಯ ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮದುವೆಯ ವಿಚಾರವನ್ನು ಯುವತಿ ಪ್ರಸ್ತಾಪಿಸುತ್ತಿದ್ದರೂ, ಆತ ನೆಪ ಹೇಳುತ್ತಿದ್ದ. ಈ ಮಧ್ಯೆ ಆಕೆ ಮೂರು ಬಾರಿ ಗರ್ಭಿಣಿಯಾಗಿದ್ದಳು. ಆದರೆ ರವಿಕುಮಾರ್ ಅಬಾರ್ಷನ್ ಮಾಡಿಸಿದ್ದನು. ಕೆಲವು ದಿನಗಳ ನಂತರ ಮದುವೆ ವಿಚಾರ ಪ್ರಸ್ತಾಪಿಸಿದಾಗ ಆರೋಪಿ ಮದುವೆಯಾಗಲು ನಿರಾಕರಿಸಿದನು.