ಕರ್ನಾಟಕ

karnataka

ETV Bharat / bharat

Omicron ಆತಂಕದಿಂದ ಹೊರಬಂದ ಉದ್ಯಮಗಳು: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ಒಮಿಕ್ರೋನ್ ಆತಂಕದಲ್ಲಿ ನಷ್ಟಕ್ಕೆ ಒಳಗಾಗಿದ್ದ ಜಾಗತಿಕ ಮಾರುಕಟ್ಟೆಗಳ ಪ್ರಭಾವ ದೇಶದ ಮಾರುಕಟ್ಟೆಗಳ ಮೇಲೆಯೂ ಆಗಿದ್ದು, ನಷ್ಟಕ್ಕೆ ಒಳಗಾಗಿದ್ದವು. ಈಗ ಸ್ವಲ್ಪ ಮಟ್ಟದ ಚೇತರಿಕೆ ಕಂಡುಬರುತ್ತಿದೆ.

Bombay stock exchange sensex and nifty points now
Omicron ಆತಂಕದಿಂದ ಹೊರಬಂದ ಉದ್ಯಮಗಳು: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

By

Published : Dec 1, 2021, 11:15 AM IST

ಮುಂಬೈ:ದೇಶದ ಜಿಡಿಪಿಯಲ್ಲಿ ಸ್ವಲ್ಪ ಮಟ್ಟದ ಚೇತರಿಕೆ ಕಂಡುಬಂದ ಮರುದಿನವೇ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ 644 ಪಾಯಿಂಟ್​ಗಳಿಗೂ ಹೆಚ್ಚು ಏರಿಕೆ ಕಂಡುಬಂದಿದೆ. ಈ ದಿನದ ವಹಿವಾಟಿನ ಆರಂಭದಲ್ಲಿ 57,709 ಪಾಯಿಂಟ್​ಗಳಿಗೆ ಸೆನ್ಸೆಕ್ಸ್​ ಸೂಚ್ಯಂಕ ತಲುಪಿದೆ.

ನಿಫ್ಟಿಯಲ್ಲಿರುವ ಕಂಪನಿಗಳಾದ ಎಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಲಾಭ ಗಳಿಸಿದ್ದು, ನಿಫ್ಟಿ ಸೂಚ್ಯಂಕ 17,150 ಪಾಯಿಂಟ್​ಗಳಿಗೆ ಏರಿಕೆಯಾಯಿತು.

ಕೋವಿಡ್ ರೂಪಾಂತರವಾದ ಒಮಿಕ್ರೊನ್ ಆತಂಕದಲ್ಲಿ ಇತ್ತೀಚೆಗೆ ಏಷ್ಯಾದ ಮಾರುಕಟ್ಟೆಗಳ ಷೇರು ಬೆಲೆಗಳಲ್ಲಿ ಕುಸಿದಿದ್ದವು. ಹೊಸ ವೈರಸ್‌ ಭಯದಿಂದ ಹೂಡಿಕೆದಾರರು ತಮ್ಮ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡಿದ್ದರು. ಮಾರುಕಟ್ಟೆಯ ನಷ್ಟಕ್ಕೆ ಇದೂ ಒಂದು ಕಾರಣ.ಈಗ ಅವುಗಳ ಬೆಲೆ ಏರಿಕೆಯಾಗಿದೆ.

ಜಪಾನ್‌ನ ನಿಕ್ಕಿ ಶೇಕಡಾ 0.7ರಷ್ಟು, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 1.42ರಷ್ಟು ಏರಿಕೆ ಕಂಡಿವೆ. ಸದ್ಯಕ್ಕೆ ಭಾರತದಲ್ಲಿ ಒಮಿಕ್ರೊನ್ ಭೀತಿ ಇಲ್ಲದಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಭಾರತದ ಮಾರುಕಟ್ಟೆಗಳ ಮೇಲೆ ಹಾಗೂ ಷೇರುಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿವೆ.

ರೂಪಾಯಿ ಮೌಲ್ಯ ಹೆಚ್ಚಳ:

ಷೇರು ಮಾರುಕಟ್ಟೆಯಲ್ಲಿ ಒಂದೆಡೆ ಸ್ವಲ್ಪ ಚೇತರಿಕೆ ಕಂಡುಬಂದಿದ್ದು, ಮತ್ತೊಂದೆಡೆ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 29 ಪೈಸೆಗಳಷ್ಟು ಏರಿಕೆ ಕಂಡುಬಂದಿದೆ. ಈಗ ಒಂದು ಅಮೆರಿಕನ್ ಡಾಲರ್​ಗೆ ಭಾರತದ 74.84 ರೂಪಾಯಿ ಸಮನಾಗಿದೆ.

ಇದನ್ನೂ ಓದಿ:Omicron ಪೀಡಿತ ರಾಷ್ಟ್ರಗಳ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿದ ಮಹಾರಾಷ್ಟ್ರ

ABOUT THE AUTHOR

...view details