ಕರ್ನಾಟಕ

karnataka

ಸುಶಾಂತ್ ಸಿಂಗ್ ರಜಪೂತ್ ಸಹೋದರಿ ವಿರುದ್ಧದ ದೂರು ವಜಾ

By

Published : Feb 15, 2021, 5:09 PM IST

ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮಾನಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಕಲಿ ವೈದ್ಯಕೀಯ ವರದಿ ತಯಾರಿಸಿದ ಆರೋಪದಲ್ಲಿ ದೂರು ದಾಖಲಾಗಿದ್ದು, ಇದರ ವಿರುದ್ಧ ಪ್ರಿಯಾಂಕ ಸಿಂಗ್, ಮತ್ತು ಮೀತು ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು.

bombay high court
ಬಾಂಬೆ ಹೈಕೋರ್ಟ್

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ದೂರನ್ನು ಬಾಂಬೆ ಹೈಕೋರ್ಟ್​ ವಜಾಗೊಳಿಸಿದೆ.

ಬಾಂಬೆ ಹೈಕೋರ್ಟ್​ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎಂ.ಎಸ್​.ಕಾರ್ಣಿಕ್ ಅವರಿದ್ದ ಪೀಠ ಈ ನಿರ್ಧಾರ ಕೈಗೊಂಡಿದ್ದು, ಇನ್ನೋರ್ವ ಸಹೋದರಿ ಪ್ರಿಯಾಂಕ ಸಿಂಗ್ ಅವರ ಮೇಲಿದ್ದ ದೂರನ್ನು ವಜಾಗೊಳಿಸದೇ ಪ್ರಕರಣದ ತನಿಖೆಗೆ ಅನುವು ಮಾಡಿಕೊಟ್ಟಿದೆ.

ಪ್ರಿಯಾಂಕ ಸಿಂಗ್ ಅವರ ವಿರುದ್ಧ ಸಾಕ್ಷ್ಯಾಧಾರಗಳಿದ್ದು, ಮೀತು ಸಿಂಗ್ ಅವರ ವಿರುದ್ಧದ ದೂರಿಗೆ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದೆ. ಮೀತು ಸಿಂಗ್ ಅವರ ವಿರುದ್ಧದ ಎಫ್​ಐಆರ್ ರದ್ದು ಮಾಡಿರುವುದಾಗಿ ಹೇಳಿದೆ.

ಇದನ್ನೂ ಓದಿ:ಮಥುರಾ ಜೈಲಿನಿಂದ 21 ಬಾಂಗ್ಲಾದೇಶಿಯರ ಬಿಡುಗಡೆ

ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮಾನಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಕಲಿ ವೈದ್ಯಕೀಯ ವರದಿ ತಯಾರಿಸಿದ ಆರೋಪದಲ್ಲಿ ದೂರು ದಾಖಲಾಗಿದ್ದು, ಇದರ ವಿರುದ್ಧ ಪ್ರಿಯಾಂಕ ಸಿಂಗ್, ಮತ್ತು ಮೀತು ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು.

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಕಳೆದ ವರ್ಷ ಸೆಪ್ಟೆಂಬರ್ 7ರಂದು ಈ ದೂರು ಸಲ್ಲಿಸಿದ್ದು,ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯ ತರುಣ್ ಕುಮಾರ್ ಮತ್ತು ಪ್ರಿಯಾಂಕಾ ಸಿಂಗ್, ಮೀತು ಸಿಂಗ್ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಈಗ ಒಬ್ಬರ ವಿರುದ್ಧ ದೂರು ವಜಾಗೊಂಡಿದೆ.

ABOUT THE AUTHOR

...view details