ಮುಂಬೈ(ಮಹಾರಾಷ್ಟ್ರ): ರಾಯಗಢ ಜಿಲ್ಲೆಯ ಕರಾವಳಿಯ ಮೂರು ವಿವಿಧ ಸ್ಥಳ ಹಾಗೂ ಗುಜರಾತ್ನ ಕಡಲ ತೀರದಲ್ಲಿ ಕೆಲ ಮೃತದೇಹಗಳು ಪತ್ತೆಯಾಗಿವೆ. ಒಟ್ಟು ಎಂಟು ಶವಗಳು ವಿವಿಧ ಸ್ಥಳದಲ್ಲಿ ಪತ್ತೆಯಾಗಿವೆ.
ಕಳೆದ ಕೆಲ ದಿನಗಳ ಹಿಂದೆ ತೌಕ್ತೆ ಚಂಡಮಾರುತದಿಂದಾಗಿ ಮುಂಬೈ ಅರಬ್ಬೀ ಸಮುದ್ರದಲ್ಲಿ P-305 ಬೋಟ್ ಕೊಚ್ಚಿಹೋಗಿದ್ದು, ಅದರಲ್ಲಿ ಸಾವನ್ನಪ್ಪಿರುವವರ ಮೃತದೇಹಗಳು ಇವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಡತ ತೀರದಲ್ಲಿ ಮೃತದೇಹಗಳು ಪತ್ತೆ ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರು ಸಾವು, 12 ಮಂದಿಗೆ ಗಾಯ
ರಾಯಗಢ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮಂಡ್ವಾದಲ್ಲಿ ಐದು, ಅಲಿಬಾಗ್ನಲ್ಲಿ ಎರಡು ಹಾಗೂ ಇನ್ನೊಂದು ಮುರುದ್ನಲ್ಲಿ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ಶವಗಳು ಸಿಕ್ಕಿರುವ ಬಗ್ಗೆ ಈಗಾಗಲೇ ಸ್ಥಳೀಯ ಆಡಳಿತ ಹಾಗೂ ರಾಜ್ಯ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ತೌಕ್ತೆ ಚಂಡಮಾರುತದಿಂದಾಗಿ ಬಾರ್ಜ್ ಪಿ -305 ಹಡಗು ಮುಳುಗಿದ್ದು, ಅದರಲ್ಲಿನ 261 ಸಿಬ್ಬಂದಿ ಪೈಕಿ ಈಗಾಗಲೇ 186 ಜನರ ರಕ್ಷಣೆ ಮಾಡಲಾಗಿದೆ. ಅನೇಕ ಸಿಬ್ಬಂದಿ ನಾಪತ್ತೆಯಾಗಿದ್ದು, ಕೆಲವೊಂದು ಮೃತದೇಹಗಳು ಬೇರೆಡೆ ತೇಲಿಹೋಗಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇಲ್ಲಿಯವರೆಗೆ 66 ಮೃತದೇಹಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಗುಜರಾತ್ನ ವಲ್ಸಾದ್ ಜಿಲ್ಲೆಯ ಅರೇಬಿಯನ್ ಸಮುದ್ರದ ತೀರದಲ್ಲಿ ನಾಲ್ಕು ಶವ ಪತ್ತೆಯಾಗಿದ್ದು, ಮೃತದೇಹಗಳ ಮೇಲೆ ಸಮವಸ್ತ್ರ ಮತ್ತು ಲೈಫ್ ಜಾಕೆಟ್ ನೋಡಿದಾಗ ಅವರೆಲ್ಲರೂ ಮುಂಬೈ ಕರಾವಳಿಯಲ್ಲಿ ಮುಳುಗಿದ ಹಡಗಿನ ಸದಸ್ಯರು ಆಗಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್ದೀಪ್ ಸಿಂಗ್ ತಿಳಿಸಿದ್ದಾರೆ.
ದಕ್ಷಿಣ ಗುಜರಾತ್ನ ಡುಂಗ್ರಿ ಗ್ರಾಮದ ಕಡಲ ತೀರದಲ್ಲೂ ಮೂರು ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.