ಸಿಟಾಲ್ಕುಚಿ(ಪ.ಬಂಗಾಳ) : ಕೂಚ್‌ಬೆಹಾರ್ ಜಿಲ್ಲೆಯ ಸಿಟಾಲ್ಕುಚಿಯಲ್ಲಿ ರಾಜ್ಯಪಾಲರಾದ ಜಗದೀಪ್ ಧಂಖರ್‌ಗೆ ಕಪ್ಪು ಬಾವುಟ ಪ್ರದರ್ಶಿಸಲಾಗಿದೆ. ಮತದಾನದ ನಂತರದ ಹಿಂಸಾಚಾರಕ್ಕೆ ಒಳಗಾದ ಜನರನ್ನು ಭೇಟಿ ಮಾಡಲು ಇಂದು ಅವರು ಅಲ್ಲಿಗೆ ಹೋಗಿದ್ದರು.
ಇವರು ಮಾತಾಭಂಗದಿಂದ ಸಿಟಾಲ್ಕುಚಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಎಚ್ಚೆತ್ತ ಪೊಲೀಸರು ಅವರು ರಸ್ತೆಗೆ ಬರದಂತೆ ತಡೆಯಲು ಕ್ರಮ ಜರುಗಿಸಿದರು.
ಧಂಖರ್ರ ಈ ಭೇಟಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದರು. ಈ ವೇಳೆ, ಟಿಎಂಸಿ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ ಆರಂಭವಾಗಿದೆ. ಟಿಎಂಸಿ ಗೂಂಡಾಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ಅಭ್ಯರ್ಥಿಗಳು ಗೆದ್ದಿರುವ ಕ್ಷೇತ್ರಗಳಲ್ಲೇ ಹಿಂಸಾಚಾರ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು.