ಕರ್ನಾಟಕ

karnataka

ETV Bharat / bharat

ಒಂದಲ್ಲ.., ಸಾವಿರ ಕೇಸ್​ ಹಾಕಿದ್ರೂ ಹೆದರಲ್ಲ.. ಸಿಎಂ​ ಕೇಜ್ರಿವಾಲ್​ಗೆ ತೇಜಿಂದರ್​ ಬಗ್ಗಾ ಸವಾಲು - ದೆಹಲಿ ಸಿಎಂ ವಿರುದ್ಧ ತೇಜಿಂದರ್​ ಪಾಲ್​ ಬಗ್ಗಾ ಟೀಕೆ

ಬಿಜೆಪಿ ನಾಯಕ ತೇಜಿಂದರ್​ ಪಾಲ್​ ಬಗ್ಗಾ ಅವರು ದೆಹಲಿ ಸಿಎಂ, ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ಗೆ ಸವಾಲು ಹಾಕಿದ್ದಾರೆ. ನನ್ನ ವಿರುದ್ಧ ಸಾವಿರ ಕೇಸ್​ ಹಾಕಿದ್ರೂ ಜಗ್ಗಲ್ಲ ಎಂದು ಗುಡುಗಿದ್ದಾರೆ.

bjps-tajinder-bagga
ತೇಜಿಂದರ್​ ಪಾಲ್​ ಬಗ್ಗಾ

By

Published : May 11, 2022, 6:02 PM IST

ನವದೆಹಲಿ:ಆಪ್​ ಸರ್ಕಾರ ಮತ್ತು ಬಿಜೆಪಿ ಮುಖಂಡ ತೇಜಿಂದರ್​ ಪಾಲ್​ ಬಗ್ಗಾ ಮಧ್ಯೆ ಸಮರ ಮುಂದುವರಿದಿದೆ. ನಿನ್ನೆಯಷ್ಟೇ ತೇಜಿಂದರ್​ ಪಾಲ್​ ಬಗ್ಗಾರನ್ನು ಜುಲೈ 5ರವರೆಗೆ ಬಂಧಿಸುವಂತಿಲ್ಲ ಎಂದು ಹೈಕೋರ್ಟ್​ ಆದೇಶ ನೀಡಿದೆ. ಬಳಿಕ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಹರಿಹಾಯ್ದಿರುವ ಬಗ್ಗಾ, ನನ್ನ ಮೇಲೆ ಒಂದಲ್ಲ, ಸಾವಿರ ಕೇಸ್​ ಹಾಕಿದರೂ ನಾನು ಹೆದರಲ್ಲ' ಎಂದು ಸವಾಲು ಹಾಕಿದ್ದಾರೆ.

ಹೈಕೋರ್ಟ್​ ಆದೇಶ ನೀಡಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಟಿ ನಡೆಸಿದ ಬಗ್ಗಾ, ಗುರು ಗ್ರಂಥ ಸಾಹಿಬ್ ತ್ಯಾಗ ಪ್ರಕರಣ, ಡ್ರಗ್ಸ್​ ಮಾಫಿಯಾ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು. ಕ್ರಮ ವಹಿಸದೇ ಇದ್ದುದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಪಂಜಾಬ್ ಪೊಲೀಸರು ಭಯೋತ್ಪಾದಕನಂತೆ ಬಿಂಬಿಸಿ, ಬಂಧಿಸಿದ್ದರು ಎಂದು ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಟೀಕಿಸಿದ್ದಾರೆ.

ಡ್ರಗ್ಸ್​ ಮಾಫಿಯಾ ಮತ್ತು ಪ್ರತ್ಯೇಕತಾವಾದಿಗಳ, ಗುರು ಗ್ರಂಥ ಸಾಹಿಬ್ ಅವಮಾನಿಸಿದವರ ವಿರುದ್ಧ ಪಂಜಾಬ್​ ಸರ್ಕಾರ ಕ್ರಮ ವಹಿಸಿಲ್ಲ. ಇದನ್ನು ಕೇಳುವುದು ತಪ್ಪೇ?. ನನ್ನ ವಿರುದ್ಧ ಒಂದಲ್ಲ, ಸಾವಿರ ಪ್ರಕರಣಗಳನ್ನು ದಾಖಲಿಸಿದರೂ ಇದನ್ನು ನಾನು ಪ್ರಶ್ನಿಸದೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಜುಲೈ 5 ರವರೆಗೆ ಬಗ್ಗಾ ಅವರನ್ನು ಬಂಧಿಸದಂತೆ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಮಂಗಳವಾರ ಪಂಜಾಬ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ಓದಿ: ತೇಜಿಂದರ್ ಪಾಲ್ ಬಗ್ಗಾಗೆ ಹೈಕೋರ್ಟ್ ರಿಲೀಫ್: ಜುಲೈ 5ರವರೆಗೆ ಬಂಧಿಸದಂತೆ ತಡೆ

ABOUT THE AUTHOR

...view details