ಚಂಡೀಗಢ (ಪಂಜಾಬ್):ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸರಬ್ಜಿತ್ ಕೌರ್ ಅವರು ಗೆದ್ದು ಬೀಗಿದ್ದಾರೆ.
ಮೇಯರ್ ಹುದ್ದೆಗೆ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಡುವೆ ಭಾರಿ ಪೈಪೋಟಿ ನಡೆದಿತ್ತು. ಚಲಾವಣೆಯಾದ 28 ಮತಗಳ ಪೈಕಿ ಬಿಜೆಪಿಯ ಸರಬ್ಜಿತ್ ಕೌರ್ 14 ಮತಗಳನ್ನು ಗಳಿಸಿ ಮೇಯರ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಒಂದೇ ಒಂದು ಮತದಿಂದ ಎಎಪಿಯ ಅಂಜು ಕತ್ಯಾಲ್ ಸೋಲು ಕಂಡಿದ್ದಾರೆ. ಫಲಿತಾಂಶ ಪ್ರಕಟವಾದ ಕೂಡಲೇ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನ ಅಸೆಂಬ್ಲಿ ಹಾಲ್‌ನಲ್ಲಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಗದ್ದಲ ಸೃಷ್ಟಿಸಿದರು.