ಕರ್ನಾಟಕ

karnataka

ETV Bharat / bharat

ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ನ್ಯಾಯ ಸಿಗುವವರೆಗೂ ಹೋರಾಡೋಣ ಎಂದ ಖುಷ್ಬೂ

ನ್ಯಾಯ ಸಿಗುವವರೆಗೂ ಹೋರಾಡೋಣ. ಕೊಲೆ ಮಾಡಿ ಪಾರಾಗಲು ಸಾಧ್ಯವಿಲ್ಲ. ಯಾವುದೇ ಧರ್ಮ ಅಥವಾ ರಾಜಕೀಯ ನಮ್ಮ ಒಗ್ಗಟ್ಟನ್ನು ವಿಭಜಿಸುವುದಿಲ್ಲ ಎಂದು ನಟಿ ಹಾಗೂ ಬಿಜೆಪಿ ಮುಖಂಡೆ ಭಜರಂಗದಳದ ಕಾರ್ಯಕರ್ತನ ಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಕೊಲೆ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಖುಷ್ಬು ಸುಂದರ್
ಕೊಲೆ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಖುಷ್ಬು ಸುಂದರ್

By

Published : Feb 21, 2022, 7:49 PM IST

ಹೈದರಾಬಾದ್​: ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತನ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು, ಕೊಲೆ ಮಾಡಿರುವ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಖುಷ್ಬೂ ಸುಂದರ್, ನ್ಯಾಯ ಸಿಗುವವರೆಗೂ ಹೋರಾಡೋಣ. ಕೊಲೆ ಮಾಡಿ ಪಾರಾಗಲು ಸಾಧ್ಯವಿಲ್ಲ. ಯಾವುದೇ ಧರ್ಮ ಅಥವಾ ರಾಜಕೀಯ ನಮ್ಮ ಒಗ್ಗಟ್ಟನ್ನು ವಿಭಜಿಸುವುದಿಲ್ಲ. ದೇಶ ಇಬ್ಭಾಗವಾಗುವುದು ಸಾಕು. ನಾವು ಒಟ್ಟಾಗಿ ನಿಲ್ಲುತ್ತೇವೆ. ಒಟ್ಟಿಗೆ ನಾವು ಹೋರಾಟ ಮಾಡುತ್ತೇವೆ. ಈಗಲೂ ಎಂದೆಂದಿಗೂ ಅಂತಾ ಬರೆದಿದ್ದಾರೆ.

ಈ ಕೊಲೆ ಕರ್ನಾಟಕದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಹತ್ಯೆಯಲ್ಲಿ ಕೆಲ ಮುಸ್ಲಿಂ ಗೂಂಡಾಗಳ ಕೈವಾಡವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಂದಿದ್ದಾರೆ. ಹಾಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈ ಗೂಂಡಾಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಸುಳ್ಯ: ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಿಂದ ಬ್ರೆಷ್‌​ ಮಾಡಿದ ವಿದ್ಯಾರ್ಥಿನಿ ಸಾವು

ಶಿವಕುಮಾರ್ ಅವರು ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ, ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು. ಈಶ್ವರಪ್ಪ ಅವರಿಗೆ ಸಾಮಾನ್ಯ ಜ್ಞಾನವಿಲ್ಲ, ಅವರು ಈಗಾಗಲೇ ಭಾರತೀಯ ಧ್ವಜ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ವಜಾ ಮಾಡಬೇಕು. ಅವರು ದೇಶ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾರೆ ಎಂದು ಹೇಳಿದರು.

ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details