ಹೈದರಾಬಾದ್: ಬಿಜೆಪಿ ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿ ಪ್ರಕಾರ, 2019-20 ರ ಹಣಕಾಸು ವರ್ಷದಲ್ಲಿ ಬಿಜೆಪಿ 4,847.78 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದೆ. ಇದು ಎಲ್ಲ ರಾಜಕೀಯ ಪಕ್ಷಗಳಿಗಿಂತ ಅತ್ಯಧಿಕವಾಗಿದೆ.
ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ. ವರದಿ ಪ್ರಕಾರ, ಬಿಎಸ್‌ಪಿ 698.33 ಕೋಟಿ ರೂ. ಕಾಂಗ್ರೆಸ್ 588.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದೆ. 2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ವಿಶ್ಲೇಷಣೆ ಆಧಾರದ ಮೇಲೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ವರದಿ ಸಿದ್ಧಪಡಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
4847.78 ಕೋಟಿ ರೂ. ಆಸ್ತಿ ಘೋಷಣೆ ಮಾಡಿರುವ ಬಿಜೆಪಿ:ವರದಿಯ ಪ್ರಕಾರ, 2019-20ರ ಆರ್ಥಿಕ ವರ್ಷದಲ್ಲಿ 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ 6,988.57 ಕೋಟಿ ರೂ ಆಗಿದ್ದರೆ, 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿ, 2,129.38 ಕೋಟಿ ರೂ.ಗಳಾಗಿವೆ. ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 4847.78 ಕೋಟಿ ರೂ.ಆಸ್ತಿಯನ್ನು ಹೊಂದಿದೆ ಎಂದು ವರದಿಯಲ್ಲಿ ಹೇಳಿದೆ.
ಅಲ್ಲದೇ ಉಲ್ಲೇಖಿಸಲಾದ ಹಣಕಾಸು ವರ್ಷದಲ್ಲಿ ಬಿಜೆಪಿಯ ಒಟ್ಟು ಆಸ್ತಿ ಶೇ 69.37 ಆಗಿದ್ದರೆ, ಬಿಎಸ್‌ಪಿ ಒಟ್ಟು ಆಸ್ತಿ 698.33 ಕೋಟಿ ರೂ. ಅಂದರೆ ಶೇ. 9.99 ಆಗಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ನ ಒಟ್ಟು ಆಸ್ತಿ 588.16 ಕೋಟಿ ರೂ.
ಪ್ರಾದೇಶಿಕ ಪಕ್ಷಗಳ ಪೈಕಿ ಎಸ್ಪಿ ಶ್ರೀಮಂತ ಪಕ್ಷ: ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, 44 ಪ್ರಾದೇಶಿಕ ಪಕ್ಷಗಳ ಪೈಕಿ, ಅಗ್ರ 10 ಪಕ್ಷಗಳ ಆಸ್ತಿ 2028.715 ಕೋಟಿ ರೂ. ಅಂದರೆ ಘೋಷಿತ ಒಟ್ಟು ಆಸ್ತಿಯಲ್ಲಿ ಶೇ. 95.27 ರಷ್ಟು. 2019-20ರ ಆರ್ಥಿಕ ವರ್ಷದಲ್ಲಿ, ಸಮಾಜವಾದಿ ಪಕ್ಷ ಪ್ರಾದೇಶಿಕ ಪಕ್ಷಗಳಲ್ಲಿ ಗರಿಷ್ಠ ಆಸ್ತಿ 563.47 ಕೋಟಿ (26.46%) ಎಂದು ಘೋಷಿಸಿದೆ. ಇದಾದ ನಂತರ ಟಿಆರ್‌ಎಸ್ 301.47 ಕೋಟಿ ಹಾಗೂ ಎಐಎಡಿಎಂಕೆ 267.61 ಕೋಟಿ ಆಸ್ತಿ ಘೋಷಿಸಿದೆ.