ಟಿಕಮ್ಗಢ(ಮಧ್ಯಪ್ರದೇಶ):ಬಿಜೆಪಿ ಶಾಸಕನ ಸೋದರಳಿನೊಬ್ಬ ಸಮಾರಂಭವೊಂದರಲ್ಲಿ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ನಡೆದಿದೆ. ಜತಾರಾ ಕ್ಷೇತ್ರದ ಬಿಜೆಪಿ ಶಾಸಕನ ಸೋದರಳಿಯ ಈ ರೀತಿಯಾಗಿ ನಡೆದುಕೊಂಡಿದ್ದಾನೆ.
ಸಮಾರಂಭದಲ್ಲಿ ಗುಂಡು ಹಾರಿಸಿದ BJP MLA ಸೋದರಳಿಯ.. Video Viral!
ಬಿಜೆಪಿ ಶಾಸಕ ಹರಿಶಂಕರ್ ಖತಿರ್ ಅವರ ಸೋದರಳಿಯ ಸಮಾರಂಭವೊಂದರಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.
BJP MLA's nephew opened fire
ಜತಾರಾ ಶಾಸಕ ಹರಿಶಂಕರ್ ಖತಿರ್ ಅವರ ಸೋದರಳಿಯ ಅತುಲ್ ಖತಿಕ್ ಬಂದೂಕಿನಿಂದ ಗುಂಡು ಹಾರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಮಾರಂಭವೊಂದರಲ್ಲಿ ನಡೆದಿರುವ ಘಟನೆಯಾಗಿದೆ. ಈ ವಿಡಿಯೋದಲ್ಲಿ ಅತುಲ್ ಮಾತ್ರವಲ್ಲ, 10 ವರ್ಷದ ಅಪ್ರಾಪ್ತನೂ ಕೂಡ ಗುಂಡು ಹಾರಿಸುತ್ತಿರುವುದು ಕಂಡು ಬಂದಿದೆ.
ಕಾನೂನು ಮೀರಿ, ಅಧಿಕಾರದ ದಾಹದಲ್ಲಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ. ವೈರಲ್ ವಿಡಿಯೋ ಬಗ್ಗೆ ಪೊಲೀಸರು ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.