ಪಣಜಿ(ಗೋವಾ):ಗೋವಾ ವಿಧಾನಸಭೆ ಚುನಾವಣೆಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಆದರೆ, ಈ ಬೆಳವಣಿಗೆಯ ಜೊತೆ ಜೊತೆಗೆ, ಆಡಳಿತಾರೂಢ ಬಿಜೆಪಿಗೆ ಮೇಲಿಂದ ಮೇಲೆ ಹೊಡೆತ ಬೀಳಲು ಶುರುವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಭಾರತೀಯ ಜನತಾ ಪಾರ್ಟಿಯಿಂದ ಶಾಸಕರಾಗಿದ್ದ ಅಲೀನಾ ಸಾಲ್ದಾನಾ ಮತ್ತು ಕಾರ್ಲೋಸ್ ಅಲ್ಮೆಡಾ ಪಕ್ಷ ತೊರೆದಿದ್ದರು. ಇಂದು ಬಿಜೆಪಿ ಶಾಸಕ ಹಾಗೂ ಸಚಿವ ಮೈಕಲ್ ಲೋಬೊ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ಪಕ್ಷ ತೊರೆದಿದ್ದಾರೆ.
ಗೋವಾದ ಮೇಮ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರವೀಣ್ ಜಾಂಟಿಯೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪಕ್ಷದ ಪ್ರಮುಖ ನಾಲ್ವರು ಶಾಸಕರು ಬಿಜೆಪಿ ತ್ಯಜಿಸಿದಂತಾಗಿದೆ. ಇದರಿಂದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಆಡಳಿತ ಪಕ್ಷಕ್ಕೆ ಇರಿಮುರಿಸು ಉಂಟಾಗಿದೆ.
ಇದನ್ನೂ ಓದಿ:ಮುಂಬೈ ಏರ್ಪೋರ್ಟ್ನಲ್ಲಿ ವಿಮಾನದ ಬಳಿಯೇ ಹೊತ್ತಿ ಉರಿದ ಪುಶ್‌ಬ್ಯಾಕ್ ವಾಹನ
ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 40 ಸದಸ್ಯ ಬಲದ ವಿಧಾನಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು 11.6 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.