ಕರ್ನಾಟಕ

karnataka

ETV Bharat / bharat

ನಾಗಾಲ್ಯಾಂಡ್‌ನಿಂದ ರಾಜ್ಯಸಭೆಗೆ ಮೊದಲ ಮಹಿಳೆ ಆಯ್ಕೆ: ಕೇರಳದಲ್ಲಿ 4 ದಶಕದ ನಂತರ ಅವಕಾಶ

ಆಮ್​ ಆದ್ಮಿ ಪಕ್ಷವು ಪಂಜಾಬ್​ನಿಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​ ಸೇರಿ ಐವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ತೀರ್ಮಾನಿಸಿದೆ. ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿ ಎಸ್.ಫಾಂಗ್ನಾನ್ ಕೊನ್ಯಾಕ್ ಅವರನ್ನು ಆಯ್ಕೆ ಮಾಡಿದೆ. ಇತ್ತ, ಕೇರಳದಲ್ಲಿ ಕಾಂಗ್ರೆಸ್ ಪಕ್ಷ​ ಕೂಡ ಮಹಿಳಾ ಅಭ್ಯರ್ಥಿಯನ್ನೇ ಮೇಲ್ಮನೆಗೆ ಕಳುಹಿಸಲು ಮುಂದಾಗಿದೆ.

rajyasabha election
rajyasabha election

By

Published : Mar 21, 2022, 7:46 PM IST

ನವದೆಹಲಿ:ದೇಶದಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ರಾಜ್ಯಸಭೆ ಚುನಾವಣೆಯ ಕಾವೇರುತ್ತಿದೆ.

ಇದೇ ತಿಂಗಳಾಂತ್ಯದಲ್ಲಿ ನಡೆಯುವ ಸಂಸತ್ತಿನ ಮೇಲ್ಮನೆಯ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ಕಾಂಗ್ರೆಸ್​ ಮತ್ತು ಬಿಜೆಪಿ ಮಹಿಳೆಯರಿಗೆ ಮಣೆ ಹಾಕುವ ಮೂಲಕ ಗಮನ ಸೆಳೆದಿವೆ.

ಮಾರ್ಚ್​ 31ಕ್ಕೆ ವಿವಿಧ ರಾಜ್ಯಗಳಿಂದ 13 ರಾಜ್ಯಸಭಾ ಸದಸ್ಯರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಸೋಮವಾರ ಆಮ್​ ಆದ್ಮಿ ಪಕ್ಷವು ಪಂಜಾಬ್​ನಿಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​ ಸೇರಿ ಐವರನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಿದೆ. ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿ ಎಸ್.ಫಾಂಗ್ನಾನ್ ಕೊನ್ಯಾಕ್ ಅವರನ್ನು ಆಯ್ಕೆ ಮಾಡಿದೆ. ಇತ್ತ, ಕೇರಳದಲ್ಲಿ ಕಾಂಗ್ರೆಸ್​ ಕೂಡ ಮಹಿಳಾ ಅಭ್ಯರ್ಥಿಯನ್ನೇ ಮೇಲ್ಮನೆಗೆ ಕಳುಹಿಸಲು ಮುಂದಾಗಿದೆ.

ನಾಗಾಲ್ಯಾಂಡ್​ನಿಂದ ಪ್ರಪ್ರಥಮ ಮಹಿಳಾ ಸದಸ್ಯೆ: ವಿಶೇಷವೆಂದರೆ ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಹೊಸ ಇತಿಹಾಸ ಸೃಷ್ಠಿಸಿದೆ. ಇದೇ ಮೊದಲ ಬಾರಿಗೆ ಪುಟ್ಟ ರಾಜ್ಯದಿಂದ ರಾಜ್ಯಸಭೆಗೆ ಬಿಜೆಪಿ ತನ್ನ ಸದಸ್ಯರನ್ನು ಕಳುಹಿಸುತ್ತಿದೆ. ಅದರಲ್ಲೂ, ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆಯಾದ ಫಾಂಗ್ನಾನ್ ಅವರನ್ನು ಆಯ್ಕೆ ಮಾಡಿದ್ದು, ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಬ್ಬ ಮಹಿಳೆ ರಾಜ್ಯಸಭೆಗೆ ಆಯ್ಕೆ ನೇಮಕಗೊಂಡಂತೆ ಆಗಿದೆ.

ಸೋಮವಾರ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ತೆಮ್ಜೆನ್ ಇಮ್ನಾ ಅಲೋಂಗ್ ಸಮ್ಮುಖದಲ್ಲಿ ಫಾಂಗ್ನಾನ್ ಕೊನ್ಯಾಕ್ ತಮ್ಮ ನಾಮಪತ್ರ ಸಲ್ಲಿಸಿದ್ದರು. ನಾಗಾಲ್ಯಾಂಡ್​ನ ಏಕೈಕ ಸ್ಥಾನಕ್ಕೆ ಮಾ.31ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಕೊನ್ಯಾಕ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವತ್ತೇ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಇನ್ನು, ಈಶಾನ್ಯ ರಾಜ್ಯಗಳಲ್ಲಿ ಪೈಕಿ ಅಸ್ಸಾಂನಲ್ಲಿ ಎರಡು ಮತ್ತು ತ್ರಿಪುರಾದಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.

ಕೇರಳದಲ್ಲಿ 4 ದಶಕದ ಬಳಿಕ ಮಹಿಳೆಗೆ ಅವಕಾಶ: ಕೇರಳದಲ್ಲಿ ಸರಿಸುಮಾರು ನಾಲ್ಕು ದಶಕಗಳ ಬಳಿಕ ಮಹಿಳೆಯನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್​ ಮುಂದಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜೇಬಿ ಮ್ಯಾಥರ್​ ಅವರನ್ನು ಆಯ್ಕೆ ಮಾಡಲು ರಾಜ್ಯ ಕಾಂಗ್ರೆಸ್​ ನಿರ್ಧರಿಸಿದೆ.

ಕೇರಳದಿಂದ ರಾಜ್ಯಸಭೆ ನಡೆಯುವ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್​ಗೆ ರವಾನಿಸಲಾಗಿತ್ತು. ಇದರಲ್ಲಿ ಜೇಬಿ ಮ್ಯಾಥರ್ ಹೆಸರನ್ನು​ ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ಕೇರಳ ಕಾಂಗ್ರೆಸ್ ಉಸ್ತುವಾರಿ ತಾರಿಕ್ ಅನ್ವರ್ ತಿಳಿಸಿದ್ದಾರೆ.

ಜೇಬಿ ಮ್ಯಾಥರ್ ರಾಜಕೀಯ ಕುಟುಂಬದಿಂದ ಬಂದಿದ್ದು, ಅವರ ತಂದೆ ರಾಜ್ಯ ಕಾಂಗ್ರೆಸ್​ನ ಮಾಜಿ ಖಜಾಂಚಿಯಾಗಿದ್ದರು. ಅಲ್ಲದೇ, ಅಜ್ಜ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಜೇಬಿ ಮ್ಯಾಥರ್ ಸಹ ಪಕ್ಷದಲ್ಲಿ ಸಕ್ರಿಯರಾಗಿದ್ದು, ಯುವ ಕಾಂಗ್ರೆಸ್​ ನಾಯಕಿಯಾಗಿ ಕೆಲಸ ಮಾಡಿದ್ದಾರೆ. ಕೇರಳದಿಂದ ಮೂರು ಸದಸ್ಯ ಸ್ಥಾನಗಳಿಗೆ ಮಾ.31ರಂದು ಚುನಾವಣೆ ನಡೆಯಲಿದೆ.

ಇದನ್ನೂ ಓದಿ:68ರ ಇಳಿವಯಸ್ಸಿನಲ್ಲೂ ತೆಂಗಿನ ಮರ ಹತ್ತುವ ಅಜ್ಜಿ!: 46 ವರ್ಷಗಳಿಂದಲೂ ಕೃಷಿಯೇ ಈಕೆಯ ಖುಷಿ

ABOUT THE AUTHOR

...view details