ಗುಜರಾತ್ನಲ್ಲಿ ಹೊಸ ಸರ್ಕಾರ: ವೀಕ್ಷಕರಾಗಿ ರಾಜನಾಥ್, ಯಡಿಯೂರಪ್ಪ ಸೇರಿ ಮೂವರ ನೇಮಕ - ರಾಜನಾಥ್ ಸಿಂಗ್
ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರನ್ನಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಮೂವರನ್ನು ಪಕ್ಷ ನೇಮಿಸಿದೆ.
ಗುಜರಾತ್ನಲ್ಲಿ ಹೊಸ ಸರ್ಕಾರ ರಚನೆ: ವೀಕ್ಷಕರಾಗಿ ರಾಜನಾಥ್, ಯಡಿಯೂರಪ್ಪ ಸೇರಿ ಮೂವರ ನೇಮಕ
ನವ ದೆಹಲಿ: ಗುಜರಾತ್ನಲ್ಲಿ ಪ್ರಚಂಡ ಬಹುಮತ ಪಡೆದಿರುವ ಬಿಜೆಪಿ ಅಧಿಕಾರ ರಚಿಸಲು ಸಿದ್ಧತೆ ಆರಂಭಿಸಿದ್ದು, ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರನ್ನಾಗಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಮೂವರನ್ನು ನೇಮಿಸಲಾಗಿದೆ.