ನವದೆಹಲಿ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಮತ್ತೆ 91 ಅಭ್ಯರ್ಥಿಗಳನ್ನು ಘೋಷಿಸಿದೆ. ಹಲವು ಸಚಿವರಿಗೆ ಟಿಕೆಟ್ ನೀಡಲಾಗಿದ್ದು, 16 ಮಂದಿ ಶಾಸಕರಿಗೆ ಟಿಕೆಟ್ನಿಂದ ವಂಚಿತರಾಗಿದ್ದಾರೆ.
ಹಾಲಿ ಶಾಸಕ ವೇದ್ ಪ್ರಕಾಶ್ ಗುಪ್ತಾಗೆ ಮತ್ತೆ ಅಯೋಧ್ಯೆ ಕ್ಷೇತ್ರದಲ್ಲೇ ಟಿಕೆಟ್ ನೀಡಲಾಗಿದ್ದು, 9 ಮಹಿಳೆಯರು ಹಾಗೂ ದಲಿತ ಸಮುದಾಯದ 20 ಅಭ್ಯರ್ಥಿಗಳಿಗೆ ಮನ್ನಣೆ ನೀಡಲಾಗಿದೆ. ಬಿಸ್ವಾ ಕ್ಷೇತ್ರದ ಹಾಲಿ ಶಾಸಕ ಮಹೇಂದ್ರ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಬದಲಿಗೆ ನಿರ್ಮಲ್ ವರ್ಮಾಗೆ ಮಣೆ ಹಾಕಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹಾಲಿ ಶಾಸಕ ವಿಕ್ರಮ್‌ಜಿತ್ ಮೌರ್ಯ ಬದಲಿಗೆ ಗುರು ಪ್ರಸಾದ್ ಮೌರ್ಯಗೆ ಫಾಫಮೌ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಹೈದರ್‌ಗಢ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬೈಜನಾಥ್ ರಾವತ್ ಬದಲಿಗೆ ದಿನೇಶ್ ರಾವತ್ರನ್ನು ಕಣಕ್ಕಿಳಿಸಿದೆ.
ರಾಜ್ಯದ ಸಂಪುಟ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರ ಪ್ರಸ್ತುತ ಕ್ಷೇತ್ರವಾದ ಅಲಹಾಬಾದ್ ಪಶ್ಚಿಮದಿಂದ ಟಿಕೆಟ್ ನೀಡಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಶಲಭ್ ಮಣಿ ತ್ರಿಪಾಠಿಗೆ ಡಿಯೋರಿಯಾದಿಂದ ಟಿಕೆಟ್ ಲಭಿಸಿದ್ದು, ಪ್ರಸ್ತುತ ಸತಿಮಣಿ ತ್ರಿಪಾಠಿ ಪ್ರತಿನಿಧಿಸುತ್ತಿದ್ದಾರೆ.
ಬಿಜೆಪಿ ಇದುವರೆಗೆ 295 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10ರಿಂದ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ:'ಹೆತ್ತ ತಾಯಿಯನ್ನೇ ಬೀದಿಪಾಲು ಮಾಡಿದ ಕ್ರೂರಿ' ನವಜೋತ್ ಸಿಂಗ್ ಮೇಲೆ ಸಹೋದರಿ ಆರೋಪ