ಕರ್ನಾಟಕ

karnataka

ETV Bharat / bharat

ದೇಶದ 7 ರಾಜ್ಯಗಳಲ್ಲಿ ಹಕ್ಕಿ ಜ್ವರ ಭೀತಿ; ರಾಜಸ್ಥಾನದಲ್ಲಿ ಕಟ್ಟೆಚ್ಚರ - ಹಕ್ಕಿ ಜ್ವರ

ದೇಶದ 7 ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಕಾಣಿಸಿಕೊಂಡಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ,

Bird flu
ಹಕ್ಕಿ ಜ್ವರ

By

Published : Jan 10, 2021, 9:10 AM IST

ಜೈಪುರ (ರಾಜಸ್ಥಾನ): ಹಕ್ಕಿ ಜ್ವರ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, 7 ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಕಾಣಿಸಿಕೊಂಡಿದೆ. ಅನೇಕ ಪಕ್ಷಿಗಳು ಈ ರೋಗಕ್ಕೆ ತುತ್ತಾಗಿವೆ. ರಾಜಸ್ಥಾನದಲ್ಲೂ ಅವ್ಯವಸ್ಥೆ ಸೃಷ್ಟಿಸುತ್ತಿರುವ ಹಕ್ಕಿ ಜ್ವರ ಇದುವರೆಗೆ ರಾಜ್ಯದ 11 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ.

ಜೈಪುರ, ಜುಂಜುನು, ಟೋಂಕ್, ಸವಾಯಿ ಮಾಧೋಪುರ್, ಶ್ರೀಗಂಗನಗರ, ಜೋಧ್​ಪುರ, ಪಾಲಿ, ಕೋಟಾ, ಬುಂಡಿ, ಬಾರನ್ ಮತ್ತು ಜಲಾವರ್​ನಲ್ಲಿ ಹಲವಾರು ಹಕ್ಕಿಗಳ ಸಾವಿನ ಪ್ರಕರಣಗಳು ವರದಿಯಾಗಿವೆ.

ಹಕ್ಕಿ ಜ್ವರಕ್ಕೆ ಸಾವನ್ನಪ್ಪಿದ ಕಾಗೆಗಳು

ಜಲಾವರ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 63 ಪಕ್ಷಿಗಳು ಸಾವನ್ನಪ್ಪಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಪಕ್ಷಿ ಜ್ವರ ಪ್ರಕರಣಗಳ ಮಧ್ಯೆ ಸರ್ಕಾರ ಸಂಪೂರ್ಣ ಎಚ್ಚರಿಕೆಯ ಕ್ರಮದಲ್ಲಿದೆ. ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಿಎಂ ಅಶೋಕ್ ಗೆಹ್ಲೋಟ್ ಕೂಡ ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಪಿಪಿಇ ಕಿಟ್‌ಗಳನ್ನು ಧರಿಸದೆ ಪಕ್ಷಿಗಳ ನಡುವೆ ಹೋಗಬೇಡಿ ಎಂದು ಅವರು ಪಕ್ಷಿ ಮಾರಾಟಗಾರರಿಗೆ ಸಲಹೆ ನೀಡಿದ್ದಾರೆ.

24 ಗಂಟೆಗಳಲ್ಲಿ 63 ಪಕ್ಷಿಗಳು ಸಾವು

ಜಲಾವರ್ ಜಿಲ್ಲೆಯಲ್ಲಿ 44 ಕಾಗೆಗಳು ಸೇರಿದಂತೆ ಕಳೆದ 24 ಗಂಟೆಗಳಲ್ಲಿ 63 ಪಕ್ಷಿಗಳು ಸಾವನ್ನಪ್ಪಿವೆ. ಇದಲ್ಲದೆ, 18 ಪಾರಿವಾಳಗಳು ಮತ್ತು ಒಂದು ಕೊಕ್ಕರೆ ಸಹಾ ಸಾವನ್ನಪ್ಪಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಹಕ್ಕಿ ಜ್ವರದಿಂದ ಮೃತಪಟ್ಟ ಒಟ್ಟು ಪಕ್ಷಿಗಳ ಸಂಖ್ಯೆ 318 ಕ್ಕೆ ಏರಿದೆ.

ಜೋಧಪುರದ ಮೃಗಾಲಯ ಭೇಟಿ ನಿಷೇಧ

ಎರಡು ಕಾಗೆಗಳ ಮೃತದೇಹಗಳು ಪತ್ತೆಯಾದ ಬಳಿಕ, ಪಶುಸಂಗೋಪನಾ ಇಲಾಖೆಯ ಸಹಾಯದಿಂದ ಅರಣ್ಯ ಇಲಾಖೆ ತಂಡವು ಕಾಗೆಗಳ ಶವಗಳನ್ನು ಭೋಪಾಲ್ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಿತ್ತು. ಅಲ್ಲಿನ ವರದಿ ಹಕ್ಕಿ ಜ್ವರಕ್ಕೆ ನಕಾರಾತ್ಮಕವಾಗಿ ಬಂದಿದೆ. ಆದರೆ, ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಜಾಗರೂಕತೆ ವಹಿಸಲು ಪ್ರಾರಂಭಿಸಿದೆ. ಮಾಚಿಯಾ ಬಾಲಾಜಿ ಜೋಧಪುರದ ಮೃಗಾಲಯಕ್ಕೆ ಭೇಟಿ ನೀಡುವುದನ್ನು ಅರಣ್ಯ ಇಲಾಖೆ ನಿಷೇಧಿಸಿದೆ.

ಪಕ್ಷಿಗಳ ಸಾವಿನ ಅಂಕಿಅಂಶಗಳು

ಪಶುಸಂಗೋಪನಾ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಶನಿವಾರ ಒಟ್ಟು 356 ಪಕ್ಷಿಗಳು ಸಾವನ್ನಪ್ಪಿದ್ದು, ಇದರಲ್ಲಿ 257 ಕಾಗೆಗಳು ಸಾವನ್ನಪ್ಪಿವೆ. ಶನಿವಾರ ಸಂಜೆ ವೇಳೆಗೆ ಒಟ್ಟು 2,522 ಪಕ್ಷಿಗಳು ಸಾವನ್ನಪ್ಪಿದ್ದಾವೆ. ಅದರಲ್ಲಿ 211 ಮಾದರಿಗಳನ್ನು ಭೋಪಾಲ್‌ಗೆ ತನಿಖೆಗೆ ಕಳುಹಿಸಲಾಗಿದೆ.

ಕೋಳಿ ವ್ಯವಹಾರದ ಮೇಲೆ ಪರಿಣಾಮ

ಹಕ್ಕಿ ಜ್ವರ ಹೆಚ್ಚುತ್ತಿರುವ ಅಪಾಯದ ಮಧ್ಯೆ ಕೋಳಿ ಮತ್ತು ಕೋಳಿ ಉದ್ಯಮಿಗಳು ರಾಜ್ಯದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈಟಿವಿ ಭಾರತ್ ಜೊತೆ ಮಾತನಾಡಿದ ಕೋಳಿ ವ್ಯಾಪಾರಿಗಳು, ಪ್ರತಿ ಕಿಲೋ ಕೋಳಿ ಬೆಲೆ 70 ರೂ.ವರೆಗೆ ಇಳಿದಿದ್ದರೆ, ಮೊಟ್ಟೆಯ ಬೆಲೆಯೂ 50 ಪೈಸೆ ಇಳಿದಿದೆ. ಆದರೆ ಕೋಳಿಗಳಲ್ಲಿ ಈವರೆಗೆ ಹಕ್ಕಿ ಜ್ವರದ ಪ್ರಕರಣಗಳು ದೃಢಪಟ್ಟಿಲ್ಲ.

ಈಟಿವಿ ಭಾರತ್​ನ ವಿಶೇಷ ಸಂವಾದದಲ್ಲಿ ಪಶುಸಂಗೋಪನಾ ಇಲಾಖೆಯ ಮುಖ್ಯ ಸರ್ಕಾರಿ ಕಾರ್ಯದರ್ಶಿ ಕುಂಜಿಲಾಲ್ ಮೀನಾ ಮಾತನಾಡಿ, ಎಲ್ಲಾ ಜಿಲ್ಲಾ ಪಶುಸಂಗೋಪನಾಧಿಕಾರಿಗಳು ಮತ್ತು ಕೋಳಿ ಸಾಕಾಣಿಕೆ ಮಾಲೀಕರು ಮತ್ತು ಅವರ ಸಂಘಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಕ್ಕಿ ಜ್ವರದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ಕೋಳಿಗಳಲ್ಲಿ ಯಾವುದೇ ಅಪಾಯವಿಲ್ಲ

ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಪ್ರಕಾರ, ಇಲ್ಲಿಯವರೆಗೆ, ರಾಜಸ್ಥಾನದ 2,500 ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಕೋಳಿಗಳಲ್ಲಿ ಯಾವುದೇ ಜ್ವರ ಕಂಡುಬಂದಿಲ್ಲ. ರಾಜಸ್ಥಾನದ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಪಕ್ಷಿ ಜ್ವರದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ರೋಗವು ಕೋಳಿಗಳಲ್ಲಿ ಅಲ್ಲ, ಕಾಗೆಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಿಎಂ ಅಶೋಕ್ ಗೆಹ್ಲೋಟ್ ಮನವಿ

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೋಷಿಯಲ್ ಮೀಡಿಯಾ ಮೂಲಕ ರಾಜ್ಯದ ಜನತೆಗೆ ಎಚ್ಚರದಿಂದಿರುವಂತೆ ಮನವಿ ಮಾಡಿದ್ದಾರೆ. ಹಕ್ಕಿ ಜ್ವರ ತಡೆಗಟ್ಟಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಪಿಪಿಇ ಕಿಟ್‌ಗಳನ್ನು ಧರಿಸದೆ ಪಕ್ಷಿಗಳ ನಡುವೆ ಚಲಿಸದಂತೆ ಪ್ರಾಣಿ ಪಾಲಕರಿಗೆ ಸಲಹೆ ನೀಡಿದ್ದಾರೆ. ಯಾವುದೇ ಪಕ್ಷಿಗಳ ಸಾವಿನ ಸಂದರ್ಭದಲ್ಲಿ, ತಕ್ಷಣ ನಿಯಂತ್ರಣ ಕೊಠಡಿಗೆ ತಿಳಿಸಿ ಎಂದು ವಿಜ್ಞಾಪಿಸಿದ್ದಾರೆ.

ABOUT THE AUTHOR

...view details