ನವದೆಹಲಿ: ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರದ ಕೋವಿಡ್ ಲಸಿಕೆ ಅಭಿಯಾನ ಕಳೆದ ಭಾನುವಾರ 200 ಕೋಟಿಯ ಮೈಲುಗಲ್ಲು ಸಾಧಿಸಿದೆ. ಇದಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ಭಾರತ 200 ಕೋಟಿ ಡೋಸ್ ಕೋವಿಡ್ 19 ಲಸಿಕೆಯನ್ನು ನೀಡುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಕೋವಿಡ್ ಪರಿಣಾಮವನ್ನು ತಗ್ಗಿಸಲು ಭಾರತೀಯ ಲಸಿಕೆ ತಯಾರಕರು ಮತ್ತು ಭಾರತ ಸರ್ಕಾರದೊಂದಿಗೆ ನಮ್ಮ ನಿರಂತರ ಪಾಲುದಾರಿಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ" ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.