ಪಾಟ್ನಾ(ಬಿಹಾರ): ಆಹ್ವಾನವಿಲ್ಲದೇ ಮದುವೆ ಊಟಕ್ಕೆಂದು ಬಂದ ಹುಡುಗನೊಬ್ಬ ವರನೊಂದಿಗೆ ಮಾತನಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಹುಡುಗ ವರನ ಬಳಿ, ಅಣ್ಣಾ, ನೀವು ಯಾರೆಂದೂ ಗೊತ್ತಿಲ್ಲ. ನಾವು ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದೇವೆ. ಇಂದು ಅಡುಗೆ ಮಾಡಲಾಗಲಿಲ್ಲ. ಹೀಗಾಗಿ ನಿಮ್ಮ ಮದುವೆಯ ಊಟಕ್ಕಾಗಿ ಬಂದಿದ್ದೇವೆ. ನಿಮಗೆ ಈ ಬಗ್ಗೆ ಏನಾದರೂ ಸಮಸ್ಯೆ ಇದೆಯೇ? ಎಂದು ಪ್ರಶ್ನಿಸಿದ್ದಾನೆ.
ಆಗ ವರನು, ಯಾರಿಗಾದರೂ ಕೊಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ನೀನು ತಿಂದು ನಿನ್ನ ಸ್ನೇಹಿತರಿಗೂ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಬಳಿಕ ಹುಡುಗ ವರನಿಗೆ ಮದುವೆ ಶುಭಾಶಯ ತಿಳಿಸುತ್ತಾನೆ. ಈ ವಿಡಿಯೋವನ್ನು ಇಂಡಿಯನ್ ಡಾಕ್ಟರ್ ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗುತ್ತಿದೆ.