ಕರ್ನಾಟಕ

karnataka

ETV Bharat / bharat

ಜಾತಿ ಆಧಾರಿತ ಜನಗಣತಿ.. ಪ್ರಧಾನಿ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ: ಬಿಹಾರ ಸಿಎಂ

ಜಾತಿ ಆಧಾರಿತ ಗಣತಿಯು ದೇಶದ ಹಿತಾಸಕ್ತಿಯನ್ನು ಹೊಂದಿದೆ. ಸಮಾಜದಲ್ಲಿ ತಾರತಮ್ಯ ಸೃಷ್ಟಿಸಬಹುದು ಎಂದು ಒಂದು ವರ್ಗದ ಜನರು ಹೇಳುತ್ತಿದ್ದಾರೆ. ಆದರೆ, ನಾನು ಜಾತಿ ಆಧಾರಿತ ಜನಗಣತಿಯನ್ನು ವೈಯಕ್ತಿಕವಾಗಿ ನಂಬುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

Bihar
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

By

Published : Sep 7, 2021, 9:21 AM IST

ಪಾಟ್ನಾ: ಜಾತಿ ಆಧಾರಿತ ಜನಗಣತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆಗಾಗಿ ರಾಜ್ಯ ಸರ್ಕಾರ ಇನ್ನೂ ಕಾಯುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

"ಜಾತಿ ಆಧಾರಿತ ಜನಗಣತಿಗೆ ಬಹುತೇಕ ಎಲ್ಲ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ದೇಶದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ನಡೆಸಿದರೆ ಉತ್ತಮವಾಗಿರುತ್ತದೆ. ಇದು ದೇಶದ ಜಾತಿಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಅದಕ್ಕನುಗುಣವಾಗಿ ನೀತಿಗಳನ್ನು ಜಾರಿಗೊಳಿಸಬಹುದು" ಎಂದು ಸಿಎಂ ಜನತಾ ದರ್ಬಾರ್​ ಬಳಿಕ ಹೇಳಿದರು.

"ಈಗ ಕೇಂದ್ರವು ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಜಾತಿ ಆಧಾರಿತ ಗಣತಿಯು ದೇಶದ ಹಿತಾಸಕ್ತಿ ಹೊಂದಿದೆ. ಸಮಾಜದಲ್ಲಿ ತಾರತಮ್ಯವನ್ನು ಸೃಷ್ಟಿಸಬಹುದು ಎಂದು ಒಂದು ವರ್ಗದ ಜನರು ಹೇಳುತ್ತಿದ್ದಾರೆ. ಆದರೆ ನಾನು ಜಾತಿ ಆಧಾರಿತ ಜನಗಣತಿಯನ್ನು ವೈಯಕ್ತಿಕವಾಗಿ ನಂಬುತ್ತೇನೆ "ಎಂದರು.

ಜಾತಿ ಆಧಾರಿತ ಗಣತಿಯನ್ನು 90 ವರ್ಷಗಳ ಹಿಂದೆ 1931 ರಲ್ಲಿ ಬ್ರಿಟಿಷರ ಕಾಲದಲ್ಲಿ ನಡೆಸಲಾಗಿತ್ತು. ಇನ್ನು ಈ ಸಂಬಂಧ ಸರ್ವಪಕ್ಷ ನಿಯೋಗವು ಆಗಸ್ಟ್ 23,2021 ರಂದು ಮೋದಿಯವರನ್ನು ಭೇಟಿ ಮಾಡಿತ್ತು. ಆದರೆ, ಕೇಂದ್ರವು ದೇಶದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಜಾರಿಗೆ ತರುವ ವಿಚಾರದ ಪರವಾಗಿಲ್ಲ ಎಂದು ಈಗಾಗಲೇ ಹೇಳಿದೆ.

ಇದು ಬಿಹಾರವೊಂದಷ್ಟೇ ಅಲ್ಲ ದೇಶದ ಬಹುತೇಕ ರಾಜ್ಯಗಳಲ್ಲಿ ಜಾತಿ ಗಣತಿ ಒತ್ತಾಯ ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈಗಾಗಲೇ ಕರ್ನಾಟಕದಲ್ಲಿ ಜಾತಿ ಗಣತಿ ನಡೆಸಲಾಗಿದೆ. ಆದರೆ ಅದರ ವರದಿ ಮಾತ್ರ ಬಿಡುಗಡೆ ಆಗಿಲ್ಲ. ಸಿದ್ದರಾಮಯ್ಯ ಅವಧಿಯಲ್ಲೇ ಬಹುತೇಕ ಜಾತಿಗಣತಿ ವರದಿ ಸಿದ್ಧವಾಗಿದ್ದರೂ ಇತರ ರಾಜಕೀಯ ಕಾರಣಗಳಿಗಾಗಿ ಆ ವರದಿ ಬಿಡುಗಡೆ ಆಗಿರಲಿಲ್ಲ.

ಮುಂದೆ ಬಂದ ಕುಮಾರಸ್ವಾಮಿ ಹಾಗೂ ಈಗಿನ ಬಿಜೆಪಿ ಸರ್ಕಾರ ಸಹ ಈ ಜಾತಿ ಗಣತಿ ಬಹಿರಂಗಕ್ಕೆ ಮುಂದಾಗಿಲ್ಲ. ಈ ಮಧ್ಯೆ ಜಾತಿಗಣತಿಗೆ ದೇಶಾದ್ಯಂತ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ.

ABOUT THE AUTHOR

...view details