ಸಹರಾನ್‌ಪುರ:ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕೊತ್ವಾಲಿ ದೇಹತ್ ಪ್ರದೇಶದಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಬಂಡ್ಕಿ ಗ್ರಾಮದ ಬಳಿ ಧಮೋಲಾ ನದಿಗೆ ಟ್ರ್ಯಾಕ್ಟರ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಟ್ರಾಲಿಯಲ್ಲಿ 50ಕ್ಕೂ ಹೆಚ್ಚು ಭಕ್ತರಿದ್ದರು. ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇದೇ ವೇಳೆ, ಸರ್ಕಾರ ಮೃತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಸಹರಾನ್‌ಪುರದಲ್ಲಿ ಜಹರವೀರ್ ಗೋಗಾ ಪೂಜೆ ನಡೆಯುತ್ತಿದೆದ್ದು, ಅಲ್ಲಿಗೆ 50 ಭಕ್ತರಿದ್ದ ಟ್ರ್ಯಾಕ್ಟರ್ ತೆರಳುತ್ತಿತ್ತು. ಧಮೋಲಾ ನದಿ ದಡದಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಅದರ ಟ್ರಾಲಿ ನದಿಗೆ ಜಾರಿ ಬಿದ್ದಿದೆ. ಇದರಿಂದ ಅಷ್ಟೂ ಜನರು ನದಿ ನೀರಿನಲ್ಲಿ ಮುಳುಗಿದ್ದಾರೆ. ಕೆಲವರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದರೆ. ಇನ್ನೂ ಕೆಲವರು ಟ್ರಾಲಿ ಒಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ನಾಪತ್ತೆಯಾದವರ ಹುಡುಕಾಟ:ಅಪಘಾತದಲ್ಲಿ ಭಕ್ತರು ಟ್ರ್ಯಾಕ್ಟರ್ ಟ್ರಾಲಿಯಡಿ ಸಿಲುಕಿದ್ದರು. ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳದಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕೆಲವು ಭಕ್ತರನ್ನು ಜನರು ನದಿ ನೀರಿನಿಂದ ರಕ್ಷಿಸಿದ್ದಾರೆ. ಬಾಲಕಿ, ಮಹಿಳೆ ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದರು. ಗಾಯಗೊಂಡ ಭಕ್ತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಈಜುಗಾರರನ್ನು ಮುಳುಗು ತಜ್ಞರನ್ನು ಕರೆಯಿಸಿ ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಡೆಸಲಾಗಿದೆ.