ಮುಂಬೈ: ಮುಂಬೈ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಿನಾಯ್ಸನ್ಸ್ ಹೋಟೆಲ್ಗೆ ಮುತ್ತಿಗೆ ಹಾಕಲು ಯತ್ನಿಸಿದರು.ಈ ವೇಳೆ ಘಟನಾಸ್ಥಳದ ಸಂಪೂರ್ಣ ಚಿತ್ರಣವನ್ನು ವಾಕ್ ಥ್ರೂ ಮೂಲಕ ನಮ್ಮ ಪ್ರತಿನಿಧಿ ನೀಡಿದ್ದಾರೆ.
ರಿನಾಯ್ಸನ್ಸ್ ಹೋಟೆಲ್ ಮುತ್ತಿಗೆ ಯತ್ನ: ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಅತೃಪ್ತ ಶಾಸಕರು ತಂಗಿರುವ ರಿನಾಯ್ಸನ್ಸ್ ಹೋಟೆಲ್ಗೆ ಮುಂಬೈನ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು.
mumbai
ಸುಮಾರು ಐವತ್ತಕ್ಕೂ ಹೆಚ್ಚು ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು. ಹಣದ ಆಮಿಷವೊಡ್ಡಿ ಅತೃಪ್ತ ಶಾಸಕರನ್ನು ಹೋಟೆಲ್ನಲ್ಲಿ ಇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಿನಾಯ್ಸನ್ಸ್ ಹೋಟೆಲ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾಕಾರರನ್ನು ಹೋಟೆಲ್ ಗೇಟ್ನಲ್ಲೇ ತಡೆ ಹಿಡಿಯಲಾಯಿತು. ಈ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪ್ರತಿಭಟನಾಕರರನ್ನು ವಶಕ್ಕೆ ಪಡೆಯಲಾಯ್ತು.