ಕರ್ನಾಟಕ

karnataka

ETV Bharat / bharat

ಸಫಾಯಿ ಕರ್ಮಚಾರಿಗಳು, ನರ್ಸ್, ವೈದ್ಯರಿಗೆ 50 ಲಕ್ಷ ರೂ. ಜೀವವಿಮೆ ಘೋಷಿಸಿದ ಯೋಗಿ ಸರ್ಕಾರ - ಯೋಗಿ ಆದಿತ್ಯನಾಥ್

ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವವರ ಸಹಾಯಕ್ಕಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಧಾವಿಸಿದ್ದು ಎಲ್ಲ ಸಿಬ್ಬಂದಿಗೆ ಇನ್ಸೂರೆನ್ಸ್​ ಮಾಡಿಸಿದ್ದಾರೆ.

yogi Government
yogi Government

By

Published : Apr 1, 2020, 5:21 PM IST

ಲಖನೌ:ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರ ಜೀವ ಉಳಿಸಲು ಸರ್ಕಾರದ ವಿವಿಧ ಇಲಾಖೆಗಳ ಅನೇಕ ಸಿಬ್ಬಂದಿ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ಸೋಂಕಿತರನ್ನು ಆದಷ್ಟು ಬೇಗ ಗುಣಪಡಿಸಲು ಹರಸಾಹಸ ಪಡುತ್ತಿದ್ದಾರೆ.

ಸೋಂಕಿತರ ಆರೋಗ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಸಫಾಯಿ ಕರ್ಮಚಾರಿಗಳು, ನರ್ಸ್​ ಹಾಗೂ ವೈದ್ಯರಿಗೋಸ್ಕರ ಯೋಗಿ ಸರ್ಕಾರ 50 ಲಕ್ಷ ರೂ ವಿಮೆ​​ ಮಾಡಿಸಿದೆ.

ಉತ್ತರಪ್ರದೇಶದಲ್ಲಿ 100ಕ್ಕೂ ಹೆಚ್ಚು ಕೊರೊನಾ ಕೇಸ್​ ಕಂಡು ಬಂದಿದ್ದು, ಇಂದು 25 ವರ್ಷದ ಯುವಕನೋರ್ವ ಸೋಂಕಿನಿಂದ ಸಾವನ್ನಪ್ಪಿದ್ದಾನೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸೇರಿ ಸಭೆ ನಡೆಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ABOUT THE AUTHOR

...view details