ಹೈದರಾಬಾದ್ (ತೆಲಂಗಾಣ):ಕ್ಸಿ ಜಿನ್‌ಪಿಂಗ್ ಅವರ ಹೆಜ್ಜೆಗಳು ಯಾವಾಗಲೂ ಭಾರತದೊಂದಿಗೆ ರಾಜಿ ಮಾಡಿಕೊಳ್ಳದ ನಿಲುವನ್ನು ತೋರಿಸುತ್ತವೆ. ಕ್ಸಿ ಜಿನ್‌ಪಿಂಗ್ ಆಡಳಿತದ ಪ್ರಮುಖ ವಿಧಾನವೆಂದರೆ ಭಾರತದ ಪ್ರತಿಸ್ಪರ್ಧಿಯನ್ನು ಬಲಪಡಿಸುವುದು ಮತ್ತು ಅಶಾಂತಿಯನ್ನು ಸೃಷ್ಟಿಸುವುದಾಗಿದೆ.
ನೆರವು ಚಾಚಿ ನೆರಳು ಕಿತ್ತುಕೊಳ್ಳುವುದು ಚೀನಾ ನಾಯಕ ಕ್ಸಿ ಜಿನ್‌ಪಿಂಗ್ ನ ನೀಚ ನೀತಿ ಕ್ಸಿ ಜಿನ್‌ಪಿಂಗ್ ಸರ್ಕಾರವು ಭಾರತದ ವಿರುದ್ಧ ಅನೇಕ ಉಗ್ರರನ್ನು ಮತ್ತು ರಾಜತಾಂತ್ರಿಕ ನಿಲುವುಗಳನ್ನು ಪ್ರಚೋದಿಸಿದೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದ, ಬೀಜಿಂಗ್ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಭಾರತಕ್ಕೆ ಒಲವು ತೋರಿದೆ.
ಸುಮಾರು ಒಂದು ದಶಕದಿಂದ, ಬೀಜಿಂಗ್ ತನ್ನ ವಿದೇಶಾಂಗ ನೀತಿಯನ್ನು ವಸಾಹತುಶಾಹಿ ಮಾದರಿಯಲ್ಲಿ ರೂಪಿಸಿದೆ. ಚೀನಾ ವಿದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡುತ್ತದೆ ಮತ್ತು ಹೂಡಿಕೆಯನ್ನು ಹಿಂದಿರುಗಿಸದಂತೆ ಅವರನ್ನು ದುರ್ಬಲಗೊಳಿಸುತ್ತದೆ. ಇಲ್ಲಿಯವರೆಗೆ, ಈ ನೀತಿಯು ಕೆಲಸ ಮಾಡಿದೆ ಮತ್ತು ಅವುಗಳನ್ನು ಚೀನಾದ ವ್ಯಾಪ್ತಿಗೆ ತಂದಿದೆ.
ಇದೇ ಯೋಚನೆಯಿಂದ ಕ್ಸಿ ಆಡಳಿತವು ಒಬಿಒಆರ್, ಸಿಪಿಇಸಿ ಮತ್ತು ಇತರ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸಿತು ಮತ್ತು ಇದು ದಕ್ಷಿಣ ಏಷ್ಯಾ, ಆಫ್ರಿಕನ್, ಪೂರ್ವ ಯುರೋಪಿಯನ್, ಲ್ಯಾಟಿನ್ ಅಮೇರಿಕನ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ತನ್ನ ನೆರವು ಮತ್ತು ಅಭಿವೃದ್ಧಿ ಯೋಜನೆಗಳನ್ನು ವಿಸ್ತರಿಸಿದೆ. ಇದು ನೆರವು ಚಾಚಿ ನೆರಳು ಕಿತ್ತುಕೊಳ್ಳುವ ಚೀನಾದ ದುಷ್ಟ ನೀತಿಯಾಗಿದೆ.
ಅಷ್ಟೇ ಅಲ್ಲದೆ ಕ್ಸಿ ಜಿನ್‌ಪಿಂಗ್ ತನ್ನ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ಕ್ರಮಗಳನ್ನು ಧೈರ್ಯದಿಂದ ಸಮರ್ಥಿಸಿಕೊಂಡಿದ್ದಾನೆ.