ಹೈದರಾಬಾದ್: ವಿಶ್ವದಾದ್ಯಂತ ಬರೋಬ್ಬರಿ 30 ಮಿಲಿಯನ್ ಜನರಿಗೆ (3,03,56,725) ಕೊರೊನಾ ವೈರಸ್ ಅಂಟಿದ್ದು, 9,50,628 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, 20 ಮಿಲಿಯನ್ಗೂ ಹೆಚ್ಚು ಅಂದರೆ 2,20,46,253 ಮಂದಿ ಗುಣಮುಖರಾಗಿದ್ದಾರೆ.
ಗ್ಲೋಬಲ್ ಕೋವಿಡ್-19 ಟ್ರ್ಯಾಕರ್ ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 68,74,596 ಇದ್ದು, ಮೃತರ ಸಂಖ್ಯೆ 2,02,213ಕ್ಕೆ ಏರಿಕೆಯಾಗಿದೆ.
ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 52,14,677 ಹಾಗೂ ಮೃತರ ಸಂಖ್ಯೆ 84,372ಕ್ಕೆ ಏರಿಕೆಯಾಗಿದೆ. 3ನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 44,57,443 ಪ್ರಕರಣ ಹಾಗೂ 1,35,031 ಸಾವು ವರದಿಯಾಗಿವೆ.
4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 10,91,186 ಕೇಸ್ಗಳಿದ್ದು, 19,195 ಜನ ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಗ್ಲೋಬಲ್ ಕೋವಿಡ್-19 ಟ್ರ್ಯಾಕರ್ ಕೋವಿಡ್ ಮೊಟ್ಟ ಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 85,255 ಪ್ರಕರಣ ಹಾಗೂ 4,634 ಸಾವು ವರದಿಯಾಗಿವೆ.