ಕರ್ನಾಟಕ

karnataka

ETV Bharat / bharat

ಇಂದು ವಿಶ್ವ ಗುಬ್ಬಿ ದಿನ, ಪುಟಾಣಿ ಪಕ್ಷಿಗಳ ಉಳಿವಿಗೆ ಹೀಗೊಂದು ಐಡಿಯಾ

ಗೂಗಲ್​ನ ಈ ಐಡಿಯಾ ಗುಬ್ಬಿಗಳ ಬಗ್ಗೆ ಸಂಶೋಧನೆ ನಡೆಸಲು ಸಾಕಷ್ಟು ನೆರವಾಯಿತು. ವೈಲ್ಡ್​ ಮೈಸೂರು ತಂಡವೂ ಕೂಡ ಸಾಂಸ್ಕೃತಿಕ ನಗರದ ಜನತೆಗೆ ಇಂಥ ಒಂದು ಅವಕಾಶ ನೀಡಿದೆ.

By

Published : Mar 20, 2019, 1:33 PM IST

ಗುಬ್ಬಿ

ಹೈದರಾಬಾದ್​: ಬದಲಾದ ವಾತಾವರಣ, ತರಂಗಾಂತರಗಳ ಕಾರಣ ಮೆಟ್ರೊ ನಗರಗಳಿಂದ ಕಣ್ಮರೆಯಾದ ಗುಬ್ಬಿಗಳು ಈಗ ಕಾಣುವುದು ಬಲು ಅಪರೂಪ.

ಸಂಘ ಜೀವಿಗಳು ಹಾಗೂ ಸೂಕ್ಷ್ಮ ಹಕ್ಕಿಗಳೂ ಆದ ಗುಬ್ಬಿಗಳನ್ನು ರಕ್ಷಿಸಲು ಗೂಗಲ್​ ತನ್ನ ಮ್ಯಾಪ್​ನಲ್ಲಿ ಗುಬ್ಬಿಗಳಿರುವ ಜಾಗವನ್ನು ಗುರುತಿಸಲು ಅವಕಾಶ ಕೊಟ್ಟಿತ್ತು.

ವಿಶ್ವ ಗುಬ್ಬಿ ದಿನ

ಗೂಗಲ್​ನ ಈ ಐಡಿಯಾ ಗುಬ್ಬಿಗಳ ಬಗ್ಗೆ ಸಂಶೋಧನೆ ನಡೆಸಲು ಸಾಕಷ್ಟು ನೆರವಾಯಿತು. ವೈಲ್ಡ್​ ಮೈಸೂರು ತಂಡವೂ ಕೂಡ ಸಾಂಸ್ಕೃತಿಕ ನಗರದ ಜನತೆಗೆ ಇಂಥ ಒಂದು ಅವಕಾಶ ನೀಡಿದ್ದು, ಸಾರ್ವಜನಿಕರು ತಾವು ನೋಡಿದ ಗುಬ್ಬಿಗಳ ಕುರಿತ ಮಾಹಿತಿ ದಾಖಲಿಸಲು ಅವಕಾಶ ಮಾಡಿಕೊಟ್ಟಿದೆ.

ವಿಶ್ವ ಗುಬ್ಬಿ ದಿನ

ಈ ಸಂಬಂಧ ಪ್ರಶ್ನಾವಳಿಯನ್ನು ಪಕ್ಷಿ ಪ್ರಿಯರು ತುಂಬಬೇಕಿದೆ. ಗುಬ್ಬಚ್ಚಿ ದಿನ ಎಂದರೇನು? ಮೈಸೂರಿನಲ್ಲಿ ಗುಬ್ಬಿ ನೋಡಿದ ಜಾಗ ಎಲ್ಲಿ? ನೀವು ಶಿಕ್ಷಕರಾಗಿದ್ದರೆ ಗುಬ್ಬಿಗಳ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟಿದ್ದೀರಾ? ನಿಮ್ಮ ಮಕ್ಕಳಿಗೆ ಗುಬ್ಬಿಗಳ ಬಗ್ಗೆ ಎಷ್ಟು ಗೊತ್ತು? ಗುಬ್ಬಿಗಳು ಕಾಣೆಯಾಗಲು ಕಾರಣ ಏನು? ಅವುಗಳ ಉಳಿವಿಕೆಗೆ ಏನು ಮಾಡಬಹುದು ಎಂಬ ಸಲಹೆಗಳನ್ನು ತಂಡವು ಸಾರ್ವಜನಿಕರಿಂದ ಪಡೆಯುತ್ತಿದೆ.

ಮಾಹಿತಿಗೆ ಈ ಲಿಂಕ್​ ಕ್ಲಿಕ್​ ಮಾಡಿ:https://docs.google.com/forms/d/e/1FAIpQLSfdUlmRR4Vl3yEOEzjMPtrBBZekV8vUaGBJET_D20vx0lrdSg/viewform

ವಿಶ್ವ ಗುಬ್ಬಿ ದಿನ

ABOUT THE AUTHOR

...view details