ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 2.50 ಲಕ್ಷದ ಗಡಿ ದಾಟಿದ್ದು 12 ದಿನಗಳಲ್ಲೆ 1 ಲಕ್ಷ ಜನರು ಈ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಮೂರು ತಿಂಗಳಿಗೆ 1 ಲಕ್ಷ, 12 ದಿನಕ್ಕೆ 2 ಲಕ್ಷ: ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ಕಳೆದ 12 ದಿನಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಸೋಂಕಿತರ ಸಂಖ್ಯೆಯಲ್ಲಿ ಏರಿಕೆ
ಕಳೆದ ವರ್ಷ ಡಿಸೆಂಬರ್ನಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಮೂರು ತಿಂಗಳಲ್ಲಿ ಒಂದು ಲಕ್ಷ ಜನರಿಗೆ ಹರಡಿತ್ತು. ಆದರೆ 12 ದಿನಗಳ ಅವಧಿಯಲ್ಲಿಯೇ ಹೊಸದಾಗಿ 1 ಲಕ್ಷ ಜನರಿಗೆ ಈ ಮಹಾಮಾರಿ ತಗುಲಿರುವುದು ಗೊತ್ತಾಗಿದೆ.