ಮುಂಬೈ: ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣವನ್ನು ಕೇಂದ್ರಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣ ಕೇಂದ್ರಕ್ಕೆ ಹಸ್ತಾಂತರಿಸಲ್ಲ: ಮಹಾರಾಷ್ಟ್ರ ಸಿಎಂ
ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣವನ್ನು ಕೇಂದ್ರಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ಕೊರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣ
ಡಿಸೆಂಬರ್ 31, 2017ರಂದು ಪುಣೆಯ ಶನಿವಾರವಾಡದಲ್ಲಿ ಎಲ್ಗರ್ ಪರಿಷತ್ ಸಮಾವೇಶದಲ್ಲಿ ನಡೆದ ಪ್ರಚೋದನಕಾರಿ ಭಾಷಣದ ಪರಿಣಾಮವೇ ಈ ಹಿಂಸಾಚಾರ. ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ನೀಡಿದೆ. ಎಲ್ಗರ್ ಮತ್ತು ಕೋರೆಗಾಂವ್-ಭೀಮಾ ಎರಡು ಪ್ರತ್ಯೇಕ ಪ್ರಕರಣಗಳು. ನನ್ನ ದಲಿತ ಸಹೋದರರು ಎದುರಿಸುತ್ತಿರುವ ಕೋರೆಗಾಂವ್-ಭೀಮಾ ಪ್ರಕರಣವನ್ನು ಕೇಂದ್ರಕ್ಕೆ ನೀಡುವುದಿಲ್ಲ. ದಲಿತ ಸಹೋದರರಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಠಾಕ್ರೆ ಭರವಸೆ ನೀಡಿದ್ದಾರೆ.