ಕರ್ನಾಟಕ

karnataka

ETV Bharat / bharat

ಹಾಡಹಗಲೇ ಗುಂಡು ಹಾರಿಸಿ ಮಹಿಳೆಯನ್ನು ಕೊಂದ ಮಹಿಳೆ! - ಕೌಟುಂಬಿಕ ಕಲಹ

ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ಹಾಡಹಗಲೇ ಮತ್ತೊಬ್ಬ ಮಹಿಳೆಯನ್ನು ಕೊಂದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.

woman shot dead
ಮಹಿಳೆ ಸಾವು

By

Published : Jun 9, 2020, 2:15 PM IST

ಮೊರಾದಾಬಾದ್​(ಉತ್ತರಪ್ರದೇಶ):ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯನ್ನು ಹಾಡಹಗಲೇ ಕಂಟ್ರಿ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.

ಮಹಿಳೆ ಸಾವು

ಜೂನ್​ 8ರಂದು ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಶಬಾನಾ ಎಂದು ಗುರ್ತಿಸಲಾಗಿದೆ. ತನ್ನ ಪತಿ ಬೇರೊಬ್ಬ ಮಹಿಳೆಯ ಜೊತೆ ವಾಸವಿದ್ದ ಕಾರಣದಿಂದ ನೊಂದ ಶಬಾನಾ ಹಾಡಹಗಲೇ ಕಂಟ್ರಿ ಪಿಸ್ತೂಲ್​ನಿಂದ ಆಕೆಯನ್ನು ಕೊಂದಿದ್ದಾಳೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಕಂಟ್ರಿ ಪಿಸ್ತೂಲ್​ ಅನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details