ಹೈದರಾಬಾದ್:ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ರೋಗಿವೋರ್ವ ಮರದ ಕೆಳಗೆ ಕುಳಿತು ಹಸಿವಿನಿಂದ ಪರಿತಪಿಸುತ್ತಿದ್ದರು. ಅವರಿಗೆ ಯುವತಿವೋರ್ವಳು ಪೈಪ್ ಮೂಲಕ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾಳೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಮ್ಮಂ ಮೂಲದ ಬಡರೋಗಿಯು ಹೈದರಾಬಾದ್ನ ನಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದರು. ಈ ವೇಳೆ ವೈದ್ಯರು ಸರಿಯಾಗಿ ಸ್ಪಂದಿಸಿಲ್ಲವೆಂಬ ಆರೋಪ ಕೇಳಿಬಂದಿದೆ. ಆ ವ್ಯಕ್ತಿ ವಿಧಿಯಿಲ್ಲದೆ ಮರದ ಕೆಳಗೆ ಅಸಹಾಯಕರಾಗಿ ಕುಳಿತಿದ್ದರು. ಅವರಿಗೆ ಯುವತಿವೋರ್ವಳು ಊಟ ನೀಡಿ ಆರೈಕೆ ಮಾಡಿದ್ದಾಳೆ.