ಗಾಜಿಯಾಬಾದ್(ಉತ್ತರ ಪ್ರದೇಶ):ಇಲ್ಲಿನಲೋನಿಯ ಮುಸ್ತಾಬಾದ್ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ ಮನೆಯ ಮೇಲ್ಛಾವಣಿ ಕುಸಿದು 26 ವರ್ಷದ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆಕೆಯ ಅತ್ತಿಗೆ ಮತ್ತು ಮಗು ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಸಂತ್ರಸ್ತರಾದ ಅಂಜುಮ್(26), ಅಫ್ರೀನ್ ಮತ್ತು ಆಕೆಯ 18 ತಿಂಗಳ ಮಗು ಓವೇಶ್ ಅವರನ್ನು ನೆರೆಹೊರೆಯವರು ಅವಶೇಷಗಳಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆನಂತರ ಘಟನೆಯಲ್ಲಿ 26 ವರ್ಷದ ಅಂಜುಮ್ ಸಾವನ್ನಪ್ಪಿದ್ದು, ಅಫ್ರೀನ್ ಮತ್ತು ಆಕೆಯ ಮಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧೀಕ್ಷಕರಾದ ನೀರಜ್ ಕುಮಾರ್ ಜಾದೌನ್ ಮಾಹಿತಿ ನೀಡಿದ್ದಾರೆ.