ಕೋಲ್ಕತ್ತಾ :ಹೌರಾ ಸೇತುವೆಯ ಕಂಬದ ಮೇಲೆ ಹತ್ತಿದ 37 ವರ್ಷದ ಮಹಿಳೆಯೊಬ್ಬರು ನೊಬೆಲ್ ಪ್ರಶಸ್ತಿಗೆ ನೀಡುವಂತೆ ಪಟ್ಟು ಹಿಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಸುಮಾರು 20 ನಿಮಿಷಗಳ ಕಾಲ ಮಹಿಳೆಯು ಸೇತುವೆ ಮೇಲೆ ನಿಂತು ಆತಂಕ ಸೃಷ್ಟಿದ್ದಳು. ಹೌರಾ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳ ಜಂಟಿ ತಂಡ ಮಹಿಳೆಯನ್ನು ಮನವೊಲಿಸಿ ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮರ್ತ್ಯ ಸೇನ್ ಬಳಿ ಇರುವ ನೊಬೆಲ್ ಪ್ರಶಸ್ತಿಗಾಗಿ ಈ ಮಹಿಳೆ ಬೇಡಿಕೆ ಇರಿಸಿ ಕೆಳಗಿಳಿಯಲು ನಿರಾಕರಿಸಿದಳು. ಕೆಲ ಹೊತ್ತಿನ ಬಳಿಕ ಪೊಲೀಸರ ಮನವೊಲಿಕೆಗೆ ಒಪ್ಪಿ ಕೆಳಗಿಳಿದಳು.
ಪೊಲೀಸರ ವಶಕ್ಕೆ ಪಡೆಯುತ್ತಿದ್ದಂತೆ, ಮಹಿಳೆಯ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ನೊಬೆಲ್ ಪ್ರಶಸ್ತಿ ಗೆದ್ದಿರೋದನ್ನು ಉಲ್ಲೇಖಿಸಿದಳು. ಸೇತುವೆ ಹತ್ತಿದ್ದ ಮಹಿಳೆಯನ್ನು ಪಾದಚಾರಿಯೊಬ್ಬ ಮೊದಲು ಗಮನಿಸಿದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಲುಪುತ್ತಿದ್ದಂತೆ ಸ್ಥಳಕ್ಕೆ ಕಳೆಗಿಳಿಸುವ ಕಾರ್ಯದಲ್ಲಿ ನಿರತರಾದರು.
ಎರಡು ದಿನಗಳ ಹಿಂದೆಯೇ ಇದೇ ಮಹಿಳೆ ಹೌರಾ ಸೇತುವೆ ಏರಲು ಪ್ರಯತ್ನಿಸಿದ್ದಳು. ಆ ವೇಳೆ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳ ತಂಡ ಅವಳನ್ನು ಕೆಳಗಿಳಿಸಿತು.
ಮಹಿಳೆ ಗೊಂದಲಕ್ಕೆ ಒಳಗಾಗಿದ್ದಳು ಮತ್ತು ಗಲಾಟೆ ಮಾಡುತ್ತಿದ್ದಳು. ನಾವು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. ಅವಳು ಅವರಿಗೆ ಹಸ್ತಾಂತರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.