ಕರ್ನಾಟಕ

karnataka

ETV Bharat / bharat

ಗೆಳೆಯರಿಗೆ ಸುಪಾರಿ ಕೊಟ್ಟು ಪತಿಯನ್ನೇ ಕೊಲ್ಲಿಸಿದ ಪತ್ನಿ! - ಬ್ರೇಕಿಂಗ್ ನ್ಯೂಸ್

ನೀಟೂ ರಜನಿ ಮಾತ್ರವಲ್ಲದೇ ಇನ್ನೂ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ. ನೀಟೂ ತನ್ನ ಎಲ್ಲ ಆಸ್ತಿಯನ್ನು ಸವತಿಯರ ಹೆಸರಿಗೆ ಬರೆದು ಬಿಡುವ ಆತಂಕದಿಂದ ರಜನಿ ಆತನನ್ನು ಕೊಲ್ಲಿಸಿದ್ದಾಳೆ ಎಂದು ತಿಳಿದು ಬಂದಿದೆ.

ಗೆಳೆಯರಿಗೆ ಸುಪಾರಿ ಕೊಟ್ಟು ಪತಿಯನ್ನೇ ಕೊಲ್ಲಿಸಿದ ಪತ್ನಿ!
ಗೆಳೆಯರಿಗೆ ಸುಪಾರಿ ಕೊಟ್ಟು ಪತಿಯನ್ನೇ ಕೊಲ್ಲಿಸಿದ ಪತ್ನಿ!

By

Published : Jun 26, 2020, 12:45 PM IST

ಬಾಗಪತ್: ಪತ್ನಿಯೊಬ್ಬಳು ತನ್ನ ಪತಿಯ ಗೆಳೆಯನಿಗೇ ಸುಪಾರಿ ಕೊಟ್ಟು ಗಂಡನನ್ನು ಕೊಲ್ಲಿಸಿರುವ ಘಟನೆ ಬಡೌತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಡೌತ್ ವಲಯದ ಬಡೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೂನ್ 19 ರಂದು ನೀಟೂ ಉರ್ಫ್ ವಿಕಾಸ ಎಂಬುವವನ ಮನೆಗೆ ನುಗ್ಗಿದ ಅಪರಿಚಿತ ಬೈಕ್ ಸವಾರರು ವಿಕಾಸ್​ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಸಂಜೆ ಇನ್ನೂ ಬೆಳಕಿರುವಾಗಲೇ ನಡೆದ ಈ ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಸ್ಥಳಕ್ಕೆ ಖುದ್ದಾಗಿ ಆಗಮಿಸಿದ್ದ ಎಸ್​ಪಿ ಹಾಗೂ ಎಎಸ್​ಪಿ, ಪ್ರಾಥಮಿಕ ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಆದಷ್ಟು ಬೇಗ ಭೇದಿಸುವಂತೆ ಅಧಿಕಾರಿಗಳು ಸ್ಥಳೀಯ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ತನಿಖೆಯನ್ನು ಚುರುಕುಗೊಳಿಸಿದ ಬಡೌತ್ ಪೊಲೀಸರಿಗೆ, ಮೃತ ನೀಟೂ ಹಾಗೂ ಆತನ ಪತ್ನಿ ರಜನಿ ಸದಾ ಜಗಳವಾಡುತ್ತಿದ್ದ ವಿಷಯ ತಿಳಿಯಿತು. ಇದೇ ಆಧಾರದಲ್ಲಿ ರಜನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ಕೊಲೆಯ ವಿಷಯ ಬಹಿರಂಗವಾಗಿದೆ.

ನೀಟೂ ರಜನಿ ಮಾತ್ರವಲ್ಲದೇ ಇನ್ನೂ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ. ನೀಟೂ ತನ್ನ ಎಲ್ಲ ಆಸ್ತಿಯನ್ನು ಸವತಿಯರ ಹೆಸರಿಗೆ ಬರೆದು ಬಿಡುವ ಆತಂಕದಿಂದ ರಜನಿ ಆತನನ್ನು ಕೊಲ್ಲಿಸಿದ್ದಾಳೆ ಎಂದು ತಿಳಿದು ಬಂದಿದೆ. ನೀಟೂವನ್ನು ಕೊಲ್ಲಲು ಪತ್ನಿ ರಜನಿ, ದೆಹಲಿಯಲ್ಲಿರುವ ನೀಟೂವಿನ ಗೆಳೆಯ ರೋಹಿತ್ ಎಂಬಾತನನ್ನು ಭೇಟಿಯಾಗಿದ್ದಳು. ಪತಿಯನ್ನು ಕೊಲ್ಲಲು ಆಗಲೇ 6 ಲಕ್ಷ ರೂ. ಸುಪಾರಿ ಕೊಟ್ಟು ಡೀಲ್ ಮುಗಿಸಿದ್ದಳು. ಇದಾದ ನಂತರ ರೋಹಿತ್ ಇಬ್ಬರು ಶಾರ್ಪ್ ಶೂಟರ್​ಗಳನ್ನು ಬಾಡಿಗೆಗೆ ಪಡೆದು ಜೂನ್​ 19 ರಂದು ನೀಟೂವನ್ನು ಕೊಲ್ಲಿಸಿದ್ದ.

ABOUT THE AUTHOR

...view details