ಕರ್ನಾಟಕ

karnataka

ETV Bharat / bharat

ಅಶ್ಲೀಲ ವಿಡಿಯೋ ತೋರಿಸಿ ದಾಹ ತಣಿಸುವಂತೆ ಪತ್ನಿಗೆ ಹಿಂಸೆ.. ಮುಂದೆ!? - ಗಂಡ ಹೆಂಡ್ತಿ ಸುದ್ದಿ

ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆ ಕೋರಿಕೆ ತೀರಿಸುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಗಂಡನ ವಿರುದ್ಧ ಹೆಂಡ್ತಿ ತಿರುಗಿ ಬಿದ್ದಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jul 29, 2019, 2:08 PM IST

ಹೈದರಾಬಾದ್​:ಪ್ರತಿನಿತ್ಯ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆ ಕೋರಿಕೆ ತೀರಿಸುವಂತೆ ಗಂಡನೊಬ್ಬ ಹೆಂಡ್ತಿಗೆ ಕಿರುಕುಳ ನೀಡುತ್ತಿದ್ದನು. ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ಅನುಭವಿಸಿದ ಮಹಿಳೆ ಕೊನೆಗೂ ತನ್ನ ಗಂಡನ ವಿರುದ್ಧ ತಿರುಗಿ ಬಿದ್ದಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

33 ವರ್ಷದ ಮಹಿಳೆ ಕೆಲವು ವರ್ಷಗಳ ಹಿಂದೆ ರಘು (35)ಎಂಬಾತನ ಜೊತೆ ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ದಿನಗಳಲ್ಲಿ ರಘುವಿನಿಂದ ಆ ಮಹಿಳೆಗೆ ಕಿರುಕುಳ ಪ್ರಾರಂಭವಾಗಿದ್ದವು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಬಳಿಯಿಂದ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳ ಜೊತೆ ಹಣವು ಕಿತ್ತಿಕೊಂಡಿದ್ದ. ಈ ವಿಷಯ ಪೋಷಕರಿಗೆ ತಿಳಿಸಿದ್ರೇ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ.

ಇದಾದ ಮೇಲೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಲು ಪ್ರಾರಂಭಿಸಿದ. ಪ್ರಕೃತಿ ವಿರುದ್ಧ ಲೈಂಗಿಕ ಕ್ರಿಯೆಗೆ ಬಲವಂತ ಪಡಿಸುತ್ತಿದ್ದ. ಆದರೆ, ನಾನು ನಿರಾಕರಿಸುತ್ತಿದ್ದೆ. ಇದರಿಂದ ರಘು ನನ್ನ ಮೇಲೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದನು ಅಂತಾ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಂಡ ಹೇಳಿದ್ದ ಮಾತನ್ನು ಹೆಂಡ್ತಿ ಕೇಳಬೇಕು. ಬೇರೆಯವರ ಬಳಿ ಹೋಗ್ಬೇಕಂದ್ರೆ ಹೋಗ್ಬೇಕು ಎಂದು ಆವಾಜ್​ ಹಾಕುತ್ತಿದ್ದರು. ಮಾತು ಕೇಳದೇ ಇದ್ದಲ್ಲಿ ವಿಚ್ಛೇಧನ ಬೆದರಿಕೆ ಹಾಕಲು ಶುರು ಮಾಡಿದರು. ಈ ತಿಂಗಳು 26ರಂದು ನನ್ನ ಮೇಲೆ ಹಲ್ಲೆ ಮಾಡಿ ಹೊರ ನಡೆದ ರಘು ಮತ್ತೆ ಮನೆಗೆ ವಾಪಸ್​ ಆಗಿಲ್ಲವೆಂದು ಪತ್ನಿ ಹೈದರಾಬಾದ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details